ಬಿಜೆಪಿ ಜೊತೆಗಿನ ಸಖ್ಯ ತೊರೆದು, ಆರ್‌ಜೆಡಿ ಜೊತೆ ಸೇರಿ ಮತ್ತೆ ಹೊಸ ಸರ್ಕಾರ ರಚನೆಯ ಯತ್ನದಲ್ಲಿರುವನಿತೀಶ್ ಕುಮಾರ್ ಅವರ ಪೋಸ್ಟರ್‌ಗಳು ಬಿಹಾರದಲ್ಲಿ ಸದ್ದು ಮಾಡುತ್ತಿವೆ. ‘ನಿತೀಶ್ ಎಲ್ಲರಿಗೂ ಸೇರಿದವರು’ ಎಂಬುದಾಗಿ ದೊಡ್ಡ ಅಕ್ಷರಗಳಲ್ಲಿ ಬರೆದಿರುವ ದೊಡ್ಡ ದೊಡ್ಡ ಪೋಸ್ಟರ್‌ಗಳು ಪಟ್ನಾದ ಜೆಡಿಯು ಕಚೇರಿ ಸೇರಿದಂತೆ ನಗರದ ಹಲವು ಕಡೆ ತಲೆಎತ್ತಿವೆ ಎಂದು ಹಲವು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಸುದ್ದಿಸಂಸ್ಥೆಗಳು ಟ್ವೀಟ್ ಮಾಡಿರುವ ಪೋಸ್ಟರ್‌ನ ಚಿತ್ರವನ್ನು ರಿವರ್ಸ್ ಇಮೇಜ್ ಮೂಲಕ ಆಲ್ಟ್ ನ್ಯೂಸ್ ಪರಿಶೀಲಿಸಿದೆ. 2020ರ ವಿಧಾನಸಭಾ ಚುನಾವಣೆ ಬಳಿಕ ಈ ಪೋಸ್ಟರ್‌ಗಳನ್ನು ಹಾಕಲಾಗಿತ್ತು ಎಂದು ಅದು ಹೇಳಿದೆ. ನಿತೀಶ್ ಅವರು ಜೆಡಿಯು–ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಎಂದು ಗೃಹಸಚಿವ ಅಮಿತ್ ಶಾ ಅವರು ಘೋಷಿಸಿದ ಬಳಿಕ ಈ ಪೋಸ್ಟರ್‌ಗಳು ಕಾಣಿಸಿದ್ದವು. ಈಗ ಆರ್‌ಜೆಡಿ ಜೊತೆ ಸೇರುವ ಜೆಡಿಯು ನಿರ್ಧಾರದ ಬಳಿಕ ಇಂತಹ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ವೆಬ್‌ಸೈಟ್ ವರದಿಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.