ಮೊಬೈಲ್ನಲ್ಲಿ ಮಾತನಾಡುತ್ತಿರುವ ಮಹಿಳೆಯೊಬ್ಬರು ಮಗುವನ್ನು ರೆಫ್ರಿಜರೇಟರ್ನಲ್ಲಿ ಇಡುವ ಮತ್ತು ಆಕೆಯ ಗಂಡ ಊಟ ಕೊಡುವಂತೆ ಕೇಳಿದಾಗ ಖಾಲಿ ತಟ್ಟೆಯನ್ನು ಕೊಡುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ. ದಂಪತಿ ಮಗುವಿಗಾಗಿ ಹುಡುಕಾಡುವ ದೃಶ್ಯವೂ ಅದರಲ್ಲಿದೆ. ಇದೊಂದು ನೈಜವಾದ ಘಟನೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸಲಾಗುತ್ತಿದೆ. ಆದರೆ, ಇದು ಸುಳ್ಳು.

ವಿಡಿಯೊದ ಕೀ ಫ್ರೇಮ್ ಒಂದನ್ನು ರಿವರ್ಸ್ ಇಮೇಜ್ ಸರ್ಚ್ ವಿಧಾನದಲ್ಲಿ ಗೂಗಲ್ ಲೆನ್ಸ್ ಬಳಸಿ ಹುಡುಕಿದಾಗ, 2024ರ ಏಪ್ರಿಲ್ 6ರಂದು ಫೇಸ್ಬುಕ್ನಲ್ಲಿ ‘ಐಡಿಯಾಸ್ ಫ್ಯಾಕ್ಟರಿ’ ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆ ವಿಡಿಯೊದಲ್ಲಿ ಮಗುವನ್ನು ರೆಫ್ರಿಜರೇಟರ್ನಿಂದ ಸುರಕ್ಷಿತವಾಗಿ ಹೊರತೆಗೆಯುವ ದೃಶ್ಯವೂ ಇದೆ. ಅದೇ ವಿಡಿಯೊದಲ್ಲಿ ಡಿಸ್ಕ್ಲೇಮರ್ ಕೂಡ ಇದ್ದು, ಇದು ಕಾಲ್ಪನಿಕ ಘಟನೆಯಾಗಿದ್ದು, ಜಾಗೃತಿ ಮತ್ತು ಮನರಂಜನೆಯ ಉದ್ದೇಶಕ್ಕೆ ಈ ವಿಡಿಯೊವನ್ನು ಮಾಡಲಾಗಿದೆ ಎಂದು ಅದರಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆ ಖಾತೆಯನ್ನು ಪರಿಶೀಲಿಸಿದಾಗ, ಅದರಲ್ಲಿ ಇಂತಹ ವಿಡಿಯೊಗಳೇ ಇರುವುದು ಕಂಡು ಬಂತು. ಪೂರ್ವ ಯೋಜಿತವಾಗಿ ಚಿತ್ರಿಸಿದ ವಿಡಿಯೊವನ್ನು ನಿಜವಾದ ಘಟನೆ ಎಂದು ಬಿಂಬಿಸಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.