<p>ಮುಂಬೈ ಹೊರವಲಯದ ಪಶ್ಚಿಮ ಅಂಧೇರಿಯ ಲೋಖಂಡವಾಲದಲ್ಲಿ ಭಯೋತ್ಪಾದಕನೊಬ್ಬನನ್ನು ಬಂಧಿಸಲಾಗಿದೆ ಎಂದು ಪ್ರತಿಪಾದಿಸುತ್ತಾ ಪೊಲೀಸರು ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದುಕೊಂಡು ತಮ್ಮ ವಾಹನದತ್ತ ಕರೆದೊಯ್ಯುತ್ತಿರುವ ವಿಡಿಯೊ ತುಣಕನ್ನು ‘ಎಕ್ಸ್’ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. ತಮ್ಮ ಮನೆಯಿಂದ ಕೆಲವೇ ಮೀಟರ್ಗಳಷ್ಟು ದೂರದಲ್ಲಿರುವ ಕಾಮಧೇನು ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಬಂಧನವಾಗಿದೆ ಎಂದು ಅವರು ಹೇಳಿದ್ದಾರೆ. ದೆಹಲಿಯಲ್ಲಿ ಕಾರು ಬಾಂಬ್ ಸ್ಫೋಟಗೊಂಡ ನಂತರದಲ್ಲಿ ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಆದರೆ, ಇದು ಸುಳ್ಳು. </p>.<p>ನಿರ್ದಿಷ್ಟ ಪದಗಳನ್ನು ಬಳಸಿ ಗೂಗಲ್ನಲ್ಲಿ ಹುಡುಕಿದಾಗ ಇದೇ 16ರಂದು ಫ್ರೀ ಪ್ರೆಸ್ ಜರ್ನಲ್ನಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿತು. ಅದರೊಂದಿಗೆ ವಿಡಿಯೊ ತುಣುಕು ಕೂಡ ಇತ್ತು. ಮುಂಬೈ ಪೊಲೀಸರು ನಡೆಸಿದ ಅಣಕು ಬಂಧನ ಕಾರ್ಯಾಚರಣೆಯ ವಿಡಿಯೊ ಅದಾಗಿತ್ತು. ನಗರದಲ್ಲಿ ಭಯೋತ್ಪಾದನಾ ದಾಳಿ ನಡೆದಾಗ ಯಾವ ರೀತಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂಬುದನ್ನು ಜನರಿಗೆ ತೋರಿಸುವುದಕ್ಕಾಗಿ ಅಣಕು ಕಾರ್ಯಾಚರಣೆ ನಡೆಸಲಾಗಿದೆ ಎಂದು ಓಶಿವಾರಾ ಪೊಲೀಸರು ಸ್ಪಷ್ಟನೆ ನೀಡಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಓಶಿವಾರಾ ಪೊಲೀಸರನ್ನು ಸಂಪರ್ಕಿಸಿದಾಗ, ಅದು ನಿಜವಾದ ವಿಡಿಯೊ ಅಲ್ಲ, ಭದ್ರತಾ ಅಧಿಕಾರಿಗಳು ನಡೆಸಿದ ಅಣಕು ಕಾರ್ಯಾಚರಣೆಯದ್ದು ಎಂದು ಸ್ಪಷ್ಟಪಡಿಸಿದರು ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ. </p>