ವಿಡಿಯೊ ಮೇಲ್ಭಾಗದಲ್ಲಿ ಅದನ್ನು ಚಿತ್ರೀಕರಿಸಿದ ಸಮಯ ದಾಖಲಾಗಿದ್ದು, ಅದು ಜೂನ್ 16, 2024 ಎಂದಿದೆ. ವಯನಾಡ್‌ನಲ್ಲಿ ಭೂಕುಸಿತ ಸಂಭವಿಸಿದ್ದು ಜುಲೈ 30, 2024ರಂದು. ಜತೆಗೆ, ವಿಡಿಯೊ ಅನ್ನು ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಅದು ಚೀನಾದ ಮಿಜೊವ್ ನಗರದ ಚಿತ್ರ ಎನ್ನುವುದು ತಿಳಿದುಬಂತು. ಈ ಬಗ್ಗೆ ಮತ್ತಷ್ಟು ಹುಡುಕಾಟ ನಡೆಸಿದಾಗ, ಅಲ್ಲಿನ ಜಲಾಶಯದ ಬಾಗಿಲುಗಳನ್ನು ಯಾವುದೇ ಮುನ್ಸೂಚನೆ ನೀಡದೇ ತೆರೆದದ್ದರಿಂದ ಕೆಲವು ಮನಗೆಳು ನೀರಿನಲ್ಲಿ ಮುಳುಗಿಹೋದವು ಎನ್ನುವುದು ತಿಳಿಯಿತು. ಈ ಬಗ್ಗೆ ಅಲ್ಲಿನ ಕೆಲವು ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂತು. ಚೀನಾದ ಈ ವಿಡಿಯೊ ಅನ್ನು ಕೆಲವರು ಕೇರಳದ ಭೂಕುಸಿತಕ್ಕೆ ತಳಕು ಹಾಕಿ, ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.