ರಸ್ತೆ ಮೇಲೆ ನಮಾಜ್ ಮಾಡಲು ವಾಹನಗಳಿಗೆ ತಡೆ ಒಡ್ಡಲಾಯಿತು ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ‘ಸರ್ಕಾರದ ಪರಿಸರ ನೀತಿ ವಿರೋಧಿಸಿಇದೇ ನ.26ರಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು’ ಎಂದುಪ್ಯಾರಿಸ್‌ನ ‘ಮಿಡಿ ಲಿಬ್ರೆ’ ಎಂಬ ಸುದ್ದಿಮಾಧ್ಯಮ ವರದಿ ಮಾಡಿದೆ. ಪತ್ರಕರ್ತ ಕ್ಲಮೆಟ್ ಲಾನೆಟ್ ಎಂಬುವರು ವಿಡಿಯೊವನ್ನು ಟ್ವೀಟ್ ಮಾಡಿದ್ದು, ಪ್ರತಿಭಟನೆಯ ಬಗ್ಗೆ ಉಲ್ಲೇಖಿಸಿದ್ದಾರೆ. ‘ಎಕ್ಸ್‌ಪ್ರೆಸ್’ ವೆಬ್‌ಸೈಟ್ ಕೂಡಾ ಪರಿಸರ ಕಾರ್ಯಕರ್ತರ ಪ್ರತಿಭಟನೆಯನ್ನು ವರದಿ ಮಾಡಿದೆ. ಪರಿಸರ ಸಂಬಂಧಿ ಪ್ರತಿಭಟನೆಯನ್ನೇ ನಮಾಜ್ ಮಾಡುವ ಯತ್ನ ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಆಲ್ಟ್ ನ್ಯೂಸ್ ಹೇಳಿದೆ.