ಬಾಲಿವುಡ್ ನಟ ಶಾರುಕ್ ಖಾನ್ ಅವರು ಮೆಕ್ಕಾದಲ್ಲಿನ ಹರಮ್ ಶರೀಫ್ನಲ್ಲಿ ಫುಟ್ಬಾಲ್ ದಂತಕಥೆ ಕ್ರಿಶ್ಚಿಯಾನೊ ರೊನಾಲ್ಡೊ ಅವರ ಜತೆಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವರು, ‘ಎದ್ದೇಳಿ ಜನಗಳೇ, ಇದು ಶನಿವಾರ. ಇಲ್ಲಿ ನೋಡಿ ಶಾರುಕ್ ಖಾನ್ ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ ಅವರು ಜತೆಗಿರುವ ಚಿತ್ರ’ ಎಂದು ಪ್ರತಿಪಾದಿಸುತ್ತಾ, ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಅಸಲಿ ಚಿತ್ರ ಅಲ್ಲ.

ಚಿತ್ರವನ್ನು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ಮಾಡಿದಾಗ, ಹಲವರು ಈ ಚಿತ್ರವನ್ನು ಹಂಚಿಕೊಂಡಿರುವುದು ಕಂಡುಬಂತು. ಇಬ್ಬರೂ ಖ್ಯಾತನಾಮರು ಮೆಕ್ಕಾಕ್ಕೆ ಭೇಟಿ ನೀಡಿರುವ ಬಗ್ಗೆ ಆಗಲಿ, ಪರಸ್ಪರ ಭೇಟಿ ಮಾಡಿರುವ ಬಗ್ಗೆ ಆಗಲಿ ಎಲ್ಲಾದರೂ ಸುದ್ದಿ, ಚಿತ್ರ ಕಾಣುವುದೇ ಎಂದು ಹುಡುಕಿದಾಗ, ಎಲ್ಲೂ ಈ ಬಗ್ಗೆ ಅಧಿಕೃತವಾದ ಸುದ್ದಿ, ಚಿತ್ರ ಲಭ್ಯವಾಗಲಿಲ್ಲ. ಚಿತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದರಲ್ಲಿ ಹಲವು ರೀತಿಯ ವ್ಯತ್ಯಾಸಗಳು ಕಂಡವು. ಚಿತ್ರವನ್ನು ಹೈವ್ ಮಾಡರೇಷನ್ ಮತ್ತು ಸೈಟ್ ಎಂಜಿನ್ ಎಐ ಪತ್ತೆ ಸಾಧನಗಳ ಮೂಲಕ ಪರಿಶೀಲಿಸಿದಾಗ, ಇದು ಎಐ ನಿರ್ಮಿತ ಚಿತ್ರ ಎನ್ನುವುದು ಖಚಿತವಾಯಿತು. ನಕಲಿ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಕೆಲವರು ಸುಳ್ಳು ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಪಿಟಿಐ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.