ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅಧಿಕಾರಾವಧಿಗೆ ನೂರು ದಿನಗಳು ಪೂರ್ಣಗೊಂಡಿವೆ. ಮೊದಲ ದಿನದಿಂದಲೂ ಮೋದಿ ಒಬ್ಬರು ಶಕ್ತಿಹೀನ ಪ್ರಧಾನಿ ಎಂದುಬು ಸಾಬೀತಾಗುತ್ತಲೇ ಬಂದಿದೆ. ಅವರು ತಮ್ಮ ಮೈತ್ರಿ ಪಕ್ಷಗಳ ಮುಷ್ಟಿಯಲ್ಲಿದ್ದಾರೆ, ಯೂ ಟರ್ನ್ ತೆಗೆದುಕೊಳ್ಳುವುದುರಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
‘ದೇಶದ ಸಮಸ್ಯೆಗಳಿಗೆ ಕಣ್ಣುಮುಚ್ಚಿ ಕೂರುವ, ಅವುಗಳಿಂದ ದೂರ ಓಡಿ ಹೋಗುವ ಅವರ ‘ಅಭ್ಯಾಸ’ವು ಮುಂದುವರಿದಿದೆ. ಮೋದಿ ಅವರ ಮೂರನೇ ಅಧಿಕಾರಾವಧಿಯ ಪ್ರತಿ ದಿನವೂ ಅಸ್ಥಿರತೆಯಿಂದ ಕೂಡಿತ್ತು. ಯಾವುದಕ್ಕೂ ಸರಿಯಾದ ನಿರ್ಣಯ ಕೈಗೊಳ್ಳದ, ತೀರಾ ಅಪಕ್ವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಂಡಿದೆ’ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೆತ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಮೋದಿ ಅವರು ತಮ್ಮ ಮೂರನೇ ಅವಧಿಯ ಮೊದಲ ನೂರು ದಿನಗಳ ಕಾರ್ಯಸೂಚಿಯನ್ನು ಈಗಾಗಲೇ ಯೋಜಿಸಿದ್ದಾರೆ ಎಂಬಂತೆಲ್ಲಾ ಮಾತುಗಳು ಲೋಕಸಭೆ ಚುನಾವಣೆ ಪ್ರಚಾರಲ್ಲಿ ಕೇಳಿಬಂದಿದ್ದವು. ಆ ಕಾರ್ಯಸೂಚಿಯ ಕತೆ ಏನಾಯಿತು. ದೇಶದ ಸಮಸ್ಯೆಗಳಿಗೆ ಮೋದಿ ಅವರ ಬಳಿ ಪರಿಹಾರವೂ ಇಲ್ಲ ಅಥವಾ ಅವರಿಗೆ ದೇಶದ ಕುರಿತು ದೂರದೃಷ್ಟಿತ್ವವೂ ಇಲ್ಲ ಎನ್ನುವುದು ಈ ನೂರುಗಳಲ್ಲಿ ಸಾಬೀತಾಗಿದೆ’ ಎಂದರು.
ನಿಮ್ಮ ಬಳಿ ಏನೂ ಉಳಿದಿಲ್ಲ. ಆರ್‌ಎಸ್‌ಎಸ್‌ನೊಂದಿಗೆ ನಿಮ್ಮ ಸ್ನೇಹ ಕಹಿಯಾಗಿದೆ. ಪಕ್ಷದಲ್ಲಿ ಒಳಜಗಳ ಎದ್ದಿದೆ. ಸರ್ಕಾರಕ್ಕೆ ಗುರಿಯೇ ಇಲ್ಲದಂತಾಗಿದೆಸುಪ್ರಿಯಾ ಶ್ರೀನೆತ್ ಕಾಂಗ್ರೆಸ್ ವಕ್ತಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.