ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರು ವಶ ಪಡಿಸಿಕೊಂಡಿದ್ದ 1,000 ಲೀಟರ್ ಮದ್ಯ ಕುಡಿದದ್ದು ಇಲಿಗಳು?

Last Updated 29 ಡಿಸೆಂಬರ್ 2018, 7:04 IST
ಅಕ್ಷರ ಗಾತ್ರ

ಬರೇಲಿ:ಉತ್ತರ ಪ್ರದೇಶದ ಬರೇಲಿಯಕಂಟೋನ್ಮೆಂಟ್ ಪೊಲೀಸ್ ಠಾಣೆಯಪೊಲೀಸರುವಶ ಪಡಿಸಿಕೊಂಡಿದ್ದ 1,000 ಲೀಟರ್ ಮದ್ಯಕಾಣೆಯಾಗಿದ್ದು, ಇದಕ್ಕೆ ಇಲಿಗಳು ಕಾರಣ ಎಂದು ಪೊಲೀಸರು ದೂರಿದ್ದಾರೆ.

ಬಿಹಾರದಲ್ಲಿ ವಶಪಡಿಸಿಕೊಂಡ ಮದ್ಯ ಕಾಣೆಯಾದಾಗ, ಜಾರ್ಖಂಡದಲ್ಲಿ ಮಾದಕ ವಸ್ತುಕಾಣೆಯಾದಾಗ ಮತ್ತು ಅಸ್ಸಾಂನಲ್ಲಿ ಕರೆನ್ಸಿ ನೋಟುಗಳು ಕಾಣೆಯಾದಾಗಲೂ ಇಲಿಗಳ ಮೇಲೆ ದೂರಲಾಗಿತ್ತು.ಅಷ್ಟೇ ಯಾಕೆ ಬಿಹಾರದಲ್ಲಿ ನೆರೆಗೂ ಕಾರಣ ಇಲಿಗಳು ಎಂದು ಹೇಳಲಾಗಿತ್ತು!.

ಕಳ್ಳ ಭಟ್ಟಿ ತಯಾರಕರಿಂದ ವಶ ಪಡಿಸಿಕೊಂಡ 1000 ಲೀಟರ್‌ಗಳಿಗಿಂತಲೂ ಹೆಚ್ಚು ಮದ್ಯವನ್ನು ಬರೇಲಿಯ ಪೊಲೀಸ್ ಠಾಣೆಯ ಸಂಗ್ರಹ ಕೊಠಡಿಯಲ್ಲಿ ಇರಿಸಲಾಗಿತ್ತು.ಕೆಲವು ದಿನಗಳ ನಂತರ ಕೊಠಡಿ ಬಾಗಿಲು ತೆರೆದಾಗ ಮದ್ಯ ಮಾಯವಾಗಿತ್ತು.ಇದಕ್ಕೆ ಕಾರಣ ಇಲಿಗಳು ಎಂದು ಪೊಲೀಸರು ದೂರಿದ್ದಾರೆ.

ವಶ ಪಡಿಸಿಕೊಂಡ ಮದ್ಯವನ್ನು ಇಲಿಗಳು ಕುಡಿದವೇ? ಅಥವಾ ಬೇರೆ ಯಾವುದಾದರೂ ಮೂಲಗಳಿಂದ ಮದ್ಯ ಮಾಯವಾಯಿತೇ? ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ಅಭಿನಂದನ್ ಸಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಕೆಲಸಕ್ಕೆ ನೇಮಕವಾಗಿರುವ ಕಂಟೋನ್ಮೆಂಟ್ ಪೊಲೀಸ್ ಠಾಣೆಯ ಮುಖ್ಯ ಕ್ಲಾರ್ಕ್ ನರೇಶ್ ಪಾಲ್ ಅವರು ಸಂಗ್ರಹ ಕೊಠಡಿಯ ಬಾಗಿಲು ತೆರೆದಾಗ ಮದ್ಯ ತುಂಬಿಸಿದ್ದ ಕ್ಯಾನ್‍ಗಳು ಖಾಲಿಯಾಗಿದ್ದವು.ಅದರ ಬಳಿ ಇಲಿಗಳು ಇದ್ದವು.
ವಶಪಡಿಸಿಕೊಂಡ ಮದ್ಯದ ಮಾದರಿಯನ್ನು ತನಿಖೆಗಾಗಿ ಇಟ್ಟು ಉಳಿದ ಮದ್ಯವನ್ನು ನಾಶಮಾಡಲಾಗುತ್ತದೆ.ಈ ಬಗ್ಗೆ ನಾನು ಹಲವಾರು ಬಾರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ, ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ ಸಿಂಗ್.

ಏತನ್ಮಧ್ಯೆ, ನೀರು ಇಲ್ಲದೇ ಇರುವ ಪ್ರದೇಶದಲ್ಲಿರುವ ಇಲಿಗಳು ಕುಡಿಯಲು ಏನೂ ಸಿಗದಿದ್ದರೆ ಮದ್ಯ ಕುಡಿಯುವ ಸಾಧ್ಯತೆ ಇದೆ.ಆದರೆ ಪೊಲೀಸರು ಹೇಳಿದಂತೆ ಇಷ್ಟೊಂದು ಮದ್ಯವನ್ನು ಇಲಿಗಳು ಕುಡಿದಿರುವುದುನಂಬಲು ಅಸಾಧ್ಯ.ಇಲಿಗಳು 1,000 ಲೀಟರ್ ಮದ್ಯವನ್ನು ಕುಡಿಯಲು ಸಾಧ್ಯವಿಲ್ಲ.ಇದು ಮದ್ಯ ಕಳ್ಳತನ ಪ್ರಕರಣ ಆಗಿರುವ ಸಾಧ್ಯತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಬರೇಲಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮಾಜಿ ಪ್ರಾಧ್ಯಾಪಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಅಂದಹಾಗೆ ಮದ್ಯ ನಾಪತ್ತೆಯಾಗಿರುವುದಕ್ಕೆ ಇಲಿಗಳ ಮೇಲೆ ದೂರಿದ್ದು ಇದೇ ಮೊದಲೇನೂ ಅಲ್ಲ.ಬಿಹಾರದಲ್ಲಿ ಪೊಲೀಸರು ವಶ ಪಡಿಸಿದ್ದ 9 ಲಕ್ಷ ಲೀಟರ್‌ ನಾಪತ್ತೆಯಾದಾಗಲೂ ಇಲಿಗಳ ಮೇಲೆ ಆರೋಪ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT