ಕೋಲ್ಕತ್ತ: ಏಪ್ರಿಲ್ 6ರಂದು ರಾಮನವಮಿಯಂದು ರಾಜ್ಯದಾದ್ಯಂತ ಹಲವು ರ್ಯಾಲಿಗಳು ನಡೆಯಲಿದ್ದು, ಸುಮಾರು 1.5 ಕೋಟಿ ಹಿಂದೂಗಳು ಭಾಗವಹಿಸಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.

ಮಧ್ಯ ಕೋಲ್ಕತ್ತದ ರಾಜ್ಯ ಬಿಜೆಪಿ ಕಚೇರಿಯ ಹೊರಗೆ ನಡೆದ ಯುವ ಮೋರ್ಚಾ ರ್ಯಾಲಿಯಲ್ಲಿ ಮಾತನಾಡಿದ ಅಧಿಕಾರಿ, ಹಿಂದೂ ಗುರುತಿನ ಪ್ರಾಮುಖ್ಯತೆಯನ್ನು ಪ್ರತಿಪಾದಿಸಲು "ಜೈ ಶ್ರೀ ರಾಮ್" ಎಂದು ಜಪಿಸುತ್ತಾ ಹಿಂದೂಗಳು ತಮ್ಮ ಮನೆಗಳಿಂದ ಹೊರಬಂದು ಮೆರವಣಿಗೆಗಳಿಗೆ ಸೇರಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

‘ರಾಮ ನವಮಿಯ ಪವಿತ್ರ ದಿನದಂದು ಕನಿಷ್ಠ 1.5 ಕೋಟಿ ಹಿಂದೂಗಳು ರಸ್ತೆಗಿಳಿಯುತ್ತಾರೆ. ದಯವಿಟ್ಟು ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬೇಡಿ. ನಿಮ್ಮ ಶಕ್ತಿಯನ್ನು ತೋರಿಸಿ. ಹಿಂದೂಗಳು ಒಗ್ಗಟ್ಟಾಗಿದ್ದಾರೆಂದು ತೋರಿಸಿ. ಇದು ಸ್ವಾಮಿ ವಿವೇಕಾನಂದ, ಸ್ವಾಮಿ ರಾಮಕೃಷ್ಣ ಪರಮಾಹಂಸ ಮತ್ತು ಮಾ ಶಾರದೆಯ ಮಣ್ಣು. ನಾವು ರಾಮ ನವಮಿಯನ್ನು ಶಾಂತಿಯುತವಾಗಿ ಆಚರಿಸುತ್ತೇವೆ’ಎಂದು ಅವರು ಹೇಳಿದ್ದಾರೆ.

ಸುಮಾರು 2,000 ರ್ಯಾಲಿಗಳಲ್ಲಿ 1 ಕೋಟಿ ಹಿಂದೂಗಳು ಭಾಗವಹಿಸುತ್ತಾರೆ ಎಂದು ಅಧಿಕಾರಿ ಈ ಹಿಂದೆ ಅಂದಾಜಿಸಿದ್ದರು. ಈಗ 1.5 ಕೋಟಿ ಜನ ಭಾಗವಹಿಸುತ್ತಾರೆ ಎಂದು ಹೇಳಿದ್ದಾರೆ.

ರಾಮನವಮಿ ರ್ಯಾಲಿಗಳನ್ನು ವಿರೋಧಿಸಿದ್ದಕ್ಕಾಗಿ ಸಿಪಿಐ(ಎಂ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು,"ಸಿಪಿಐ(ಎಂ) ಹಿಂದೂ ಹಿತಾಸಕ್ತಿಗಳು ಮತ್ತು ಅಸ್ಮಿತೆ ರಕ್ಷಿಸುವಲ್ಲಿ ಆಸಕ್ತಿ ಹೊಂದಿಲ್ಲ; ವಾಸ್ತವಗಳಿಂದ ಅವರು ಸಂಪರ್ಕ ಕಡಿತಗೊಂಡಿದ್ದಾರೆ’ಎಂದು ಹೇಳಿದ್ದಾರೆ. ರಾಮನವಮಿ ಆಚರಣೆಗಳನ್ನು ವಿರೋಧಿಸುತ್ತಾ ಪ್ಯಾಲೆಸ್ಟೀನ್ ವಿಷಯದ ಕುರಿತು ರ್ಯಾಲಿಯನ್ನು ಆಯೋಜಿಸಿದ್ದಕ್ಕಾಗಿ ಸಿಪಿಐ(ಎಂ) ಅನ್ನು ಅವರು ಟೀಕಿಸಿದ್ದಾರೆ.

ಕಳೆದ ಚುನಾವಣೆಗಳಲ್ಲಿ ಶೂನ್ಯ ಸ್ಥಾನಗಳನ್ನು ಗಳಿಸಿದ್ದ ಸಿಪಿಐ(ಎಂ) ಶೀಘ್ರದಲ್ಲೇ ಬಂಗಾಳದ ರಾಜಕೀಯ ಭೂದೃಶ್ಯದಿಂದ ಕಣ್ಮರೆಯಾಗಲಿದೆ ಎಂದು ಅವರು ಕುಟುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.