ಛತ್ತೀಸಗಢ: ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ 19 ನಕ್ಸಲರನ್ನು ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪೈಕಿ ಮೂವರ ತಲೆಗೆ ಬಹುಮಾನವನ್ನು ಘೋಷಿಸಲಾಗಿತ್ತು.

ಜಾಗರಗುಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14 ನಕ್ಸಲರನ್ನು ಬಂಧಿಸಲಾಗಿದೆ. ಭಾನುವಾರ ಭೆಜ್ಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐವರನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಪಡೆ(ಡಿಆರ್ಜಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್) 219 ಮತ್ತು 150ನೇ ಬೆಟಾಲಿಯನ್, ಕೋಬ್ರಾ ಪಡೆಯ 201ನೇ ಬೆಟಾಲಿಯನ್ ಜಂಟಿ ಕಾರ್ಯಾಚರಣೆಯಲ್ಲಿ ನಕ್ಸಲರ ಬಂಧನವಾಗಿದೆ.

14 ನಕ್ಸಲರು 18 ರಿಂದ 40 ವರ್ಷ ವಯಸ್ಸಿನವರಾಗಿದ್ದಾರೆ. ಈ ಪೈಕಿ ಮೂವರ ತಲೆಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ನಕ್ಸಲರಿಂದ ಮೂರು ಜಿಲೆಟಿನ್ ಕಡ್ಡಿಗಳು, 300 ಗ್ರಾಂ ಗನ್ ಪೌಡರ್, ಸಿಡಿಮದ್ದು, ಡೆಟೊನೇಟರ್ಗಳು, ಎಲೆಕ್ಟ್ರಿಕ್ ವೈಯರ್ ಮತ್ತು ಬ್ಯಾಟರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಭೆಜ್ಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತ ಐದು ಮಂದಿ ನಕ್ಸಲರು ಗ್ರಾಮಸ್ಥನೊಬ್ಬನ ಹತ್ಯೆಯ ಆರೋಪಿಗಳಾಗಿದ್ದರು.

ಟಿಎಸ್ಪಿಸಿಯ ಮೂವರು ನಕ್ಸಲರ ಬಂಧನ

ನಿಷೇಧಿತ ನಕ್ಸಲ್ ಸಂಘಟನೆ ‘ತೃತೀಯ ಸಮ್ಮೇಳನ ಪ್ರಸ್ತುತಿ ಸಮಿತಿ’ಯ (ಟಿಎಸ್ಪಿಸಿ) ನಾಲ್ವರು ಸದಸ್ಯರನ್ನು ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಬಂಧಿತ ನಕ್ಸಲರು ಜಾರ್ಖಂಡ್ ವಿಧಾನಸಭೆಗೆ ನವೆಂಬರ್ 13 ಹಾಗೂ 20ರಂದು ನಡೆಯಲಿರುವ ಮತದಾನಕ್ಕೆ ಅಡ್ಡಿ ಮಾಡಲು ಯೋಜನೆ ರೂಪಿಸಿದ್ದರು ಎಂದು ಪಲಾಮು ಎಸ್ಪಿ ರೀಷ್ಮಾ ರಮೇಶನ್ ತಿಳಿಸಿದ್ದಾರೆ. ಕಾರೀಮಾಟಿ ಅರಣ್ಯ ವ್ಯಾಪ್ತಿಯಲ್ಲಿ ಮೂವರು ನಕ್ಸಲರನ್ನು ಸೋಮವಾರ ಸಂಜೆ ಬಂಧಿಸಲಾಗಿದೆ. ಬಂಧಿತರಿಂದ ಒಂದು ಎಕೆ–47 ಬಂದೂಕು ದೇಶಿ ಪಿಸ್ತೂಲು ದೇಶಿ ಬಂದೂಕು ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಜನ್ಗೂ ಅಧಿಕ ಪ್ರಕರಣಗಳಲ್ಲಿ ಇವರು ಆರೋಪಿಗಳಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.