ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ | ಕೂಲರ್‌ನಲ್ಲಿ ವಿದ್ಯುತ್‌ ಪ್ರವಹಿಸಿ ಇಬ್ಬರು ಮಕ್ಕಳು ಸಾವು

ಮಹಾರಾಷ್ಟ್ರದಲ್ಲಿ ಅಕೋಲಾದಲ್ಲಿ ನಡೆದ ದುರ್ಘಟನೆ
Published 24 ಜೂನ್ 2024, 13:43 IST
Last Updated 24 ಜೂನ್ 2024, 13:43 IST
ಅಕ್ಷರ ಗಾತ್ರ

ಅಕೋಲಾ: ಇಲ್ಲಿನ ಅಕೋಲಾ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಏರ್‌ ಕೂಲರ್‌ ಮುಟ್ಟಿದಾಗ ವಿದ್ಯುದಾಘಾತವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

‘ಇಲ್ಲಿನ ತೆಲ್ಹಾರಾ ತಾಲ್ಲೂಕಿನ ಕಾಳೇಗಾಂವ್‌ನಲ್ಲಿ ಬೇಸಿಗೆ ರಜೆ ಕಳೆಯಲು ಚಿಕ್ಕಪ್ಪನ ಮನೆಗೆ ಬಂದಿದ್ದ 4 ಹಾಗೂ 5 ವರ್ಷದ ಮಕ್ಕಳು ಆಟವಾಡುತ್ತಿದ್ದ ವೇಳೆ ಏರ್‌ ಕೂಲರ್‌ ಮುಟ್ಟಿದ್ದಾರೆ. ಈ ವೇಳೆ ವಿದ್ಯುದಾಘಾತದಿಂದಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು’ ಎಂದು ಹಿವರ್‌ಖೇಡ್ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು. 

ಈ ಸಂಬಂಧ ಪೊಲೀಸರು ‘ಆಕಸ್ಮಿಕ ಸಾವು’ ಎಂದು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT