ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಗಳಲ್ಲಿ 2,072 ಭಾರತೀಯರು ಕೊರೊನಾ ವೈರಸ್‌ ಸೋಂಕಿನಿಂದ ಸಾವು: ಕೇಂದ್ರ ಸರ್ಕಾರ

Last Updated 11 ಫೆಬ್ರುವರಿ 2021, 15:28 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್‌ ಸೋಂಕಿನಿಂದಾಗಿ ವಿದೇಶಗಳಲ್ಲಿ 2,072 ಮಂದಿ ಭಾರತೀಯರು ಸಾವಿಗೀಡಾಗಿದ್ದಾರೆ. ಈ ಪೈಕಿ ಸೌದಿ ಅರೇಬಿಯಾದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಭಾರತೀಯರು ಮೃತಪಟ್ಟಿರುವುದಾಗಿ ಸರ್ಕಾರ ಗುರುವಾರ ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್‌, ಕುವೈತ್‌ನಲ್ಲಿ 369 ಮಂದಿ ಹಾಗೂ ಒಮಾನ್‌ನಲ್ಲಿ 166 ಜನ ಭಾರತೀಯರು ಕೋವಿಡ್‌ನಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ ಎಂದರು.

ಗಲ್ಫ್‌ ಪ್ರಾಂತ್ಯದಲ್ಲಿ ಅಂದಾಜು 85 ಲಕ್ಷ ಭಾರತೀಯರು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ನೆಲೆಸಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ಹೆಚ್ಚಿದ ಸಮಯದಲ್ಲಿ ಸಾವಿರಾರು ಮಂದಿ ಭಾರತಕ್ಕೆ ಹಿಂದಿರುಗಿದರು. ಸೌದಿ ಅರೇಬಿಯಾದಲ್ಲಿ 906 ಜನರು ಸಾವಿಗೀಡಾಗಿದ್ದರೆ, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ 375 ಮಂದಿ ಮೃತಪಟ್ಟಿದ್ದಾರೆ.

ಕತಾರ್‌ನಲ್ಲಿ 34, ಬಹ್ರೇನ್‌ನಲ್ಲಿ 48 ಹಾಗೂ ಸುಡಾನ್‌ ಮತ್ತು ನೈಜೀರಿಯಾದಲ್ಲಿ ತಲಾ 23 ಮಂದಿ ಸಾವಿಗೀಡಾಗಿರುವುದು ಮುರಳೀಧರನ್‌ ಅವರು ನೀಡಿರುವ ವಿವರದಲ್ಲಿ ಉಲ್ಲೇಖಿಸಲಾಗಿದೆ. ಇಟಲಿಯಲ್ಲಿ 15 ಭಾರತೀಯರು, ಫ್ರಾನ್ಸ್‌ನಲ್ಲಿ 7 ಜನ, ನೇಪಾಳದಲ್ಲಿ 9, ಇರಾನ್‌ನಲ್ಲಿ 6, ಇರಾಕ್‌ನಲ್ಲಿ 7 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT