ಗುವಾಹಟಿ: ಅಸ್ಸಾಂನಲ್ಲಿ ನಡೆಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಷರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗಳು ಬಹುಪಾಲು ಮುಕ್ತಾಯಗೊಂಡಿದ್ದು, ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಿದೆ.

ಕರಡು ಮತದಾರರ ಪಟ್ಟಿಗಿಂತ ಅಂತಿಮ ಮತದಾರರ ಪಟ್ಟಿಯಲ್ಲಿ 2.43 ಲಕ್ಷ ಮತದಾರರು ಕಡಿತಗೊಂಡಿದ್ದಾರೆ. ಅಂತಿಮ ಪಟ್ಟಿಯ ಕುರಿತು ಆಕ್ಷೇಪಣೆಗಳಿದ್ದಲ್ಲಿ, ಮತದಾರರು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ 15 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬಹುದು. ಬಳಿಕ, ಮತದಾರರು ಚುನಾವಣಾ ಆಯೋಗದ ಕಚೇರಿಯಲ್ಲಿ 30 ದಿನಗಳ ಒಳಗಾಗಿ ವಿಚಾರಿಸಬಹುದು ಎಂದು ಆಯೋಗ ಹೇಳಿದೆ.

2.49 ಕೋಟಿ: ಅಂತಿಮ ಮತದಾರರ ಪಟ್ಟಿಯಲ್ಲಿರುವ ಜನರ ಸಂಖ್ಯೆ

2.52 ಕೋಟಿ: ಕರಡು ಮತದಾರರ ಪಟ್ಟಿಯಲ್ಲಿದ್ದ ಜನರ ಸಂಖ್ಯೆ

2.43 ಲಕ್ಷ: ಕೈಬಿಟ್ಟ ಮತದಾರರ ಸಂಖ್ಯೆ

1.35%: 2025ರ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಅಂತಿಮ ಮತದಾರರ ಪಟ್ಟಿಗಿಂತ ವಿಶೇಷ ಪರಿಷ್ಕರಣೆ ಬಳಿಕ ಬಿಡುಗಡೆ ಮಾಡಿದ ಕರಡು ಮತದಾರರ ಪಟ್ಟಿಯಲ್ಲಿ ಏರಿಕೆ ಕಂಡ ಮತದಾರರ ಸಂಖ್ಯೆ

0.97% : ವಿಶೇಷ ಪರಿಷ್ಕರಣೆ ಬಳಿಕ ಬಿಡುಗಡೆ ಮಾಡಲಾಗಿದ್ದ ಕರಡು ಮತದಾರರ ಪಟ್ಟಿಗಿಂತ ಅಂತಿಮ ಮತದಾರರ ಪಟ್ಟಿಯಲ್ಲಿ ಕಡಿತಗೊಂಡ ಮತದಾರರ ಸಂಖ್ಯೆ

7.86 ಲಕ್ಷ: ಮತದಾರರ ಪಟ್ಟಿಗೆ ಹೊಸದಾಗಿ ಸೇರಿಸಲಾದ ಜನರ ಸಂಖ್ಯೆ

4.47 ಲಕ್ಷ: ಮತದಾರರ ಪಟ್ಟಿಯಿಂದ ಕೈಬಿಟ್ಟ ಜನರ ಸಂಖ್ಯೆ

4.78 ಲಕ್ಷ: ಮೃತಪಟ್ಟ ಮತದಾರರ ಸಂಖ್ಯೆ

5.23 ಲಕ್ಷ: ಸ್ಥಳಾಂತರಗೊಂಡ ಮತದಾರರ ಸಂಖ್ಯೆ

53,619 : ಒಂದೇ ಮತದಾರರ ಹೆಸರು ಹಲವು ಬಾರಿ ಪಟ್ಟಿಯಲ್ಲಿ ಪತ್ತೆಯಾದ ಪ್ರಕರಣಗಳ ಸಂಖ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.