ಠಾಣೆ: ಪುಣೆ ಜಿಲ್ಲೆಯ ಇದ್ದಿಲು ತಯಾರಿಕಾ ಘಟಕದಲ್ಲಿ ಜೀತಕ್ಕೆ ದುಡಿಯುತ್ತಿದ್ದ 26 ಕಾರ್ಮಿಕರನ್ನು ಕುಟುಂಬ ಸಮೇತ ರಕ್ಷಿಸಲಾಗಿದೆ. ಒಟ್ಟು 48 ಮುಕ್ತಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಜೀತಕ್ಕೆ ದುಡಿಸುತ್ತಿದ್ದ ಸಯಾಜಿ ಬಂಡಾಲ್ಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಇಂದಾಪುರ್ ತಹಸಿಲ್ನ ಗಿರ್ವಿ ಗ್ರಾಮದಲ್ಲಿ ಇದ್ದಿಲು ಘಟಕ ಇದ್ದು, ಪುರುಷರನ್ನು ಕಾಡಿನಿಂದ ಕಟ್ಟಿಗೆ ತರಲು ನಿಯೋಜಿಸಲಾಹಿತ್ತು. ಮಹಿಳೆಯರು ಮತ್ತು ಮಕ್ಕಳನ್ನು ಬಂಧನದಲ್ಲಿರಿಸಿ ಜಮೀನುಗಳಲ್ಲಿ ದುಡಿಸಲಾಗುತ್ತಿತ್ತು.

ಬಾಂಡಲ್ಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಂಧಿತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಇಂದಾಪುರ ತಹಸೀಲ್ದಾರ್ ಕಾರ್ಮಿಕರಿಗೆ ದಾಖಲೆಗಳನ್ನು ನೀಡಿ, ಅವರ ಬಂಧ ಮುಕ್ತಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.