ತಿರುವನಂತಪುರಂ: ವಿಥುರಾದ ಕಲ್ಲಾರ್ ಬಳಿ 40 ವರ್ಷದ ಆನೆಯ ಶವ ಶನಿವಾರ ಪತ್ತೆಯಾಗಿದೆ. ಈ ವೇಳೆ 9 ತಿಂಗಳ ಆನೆ ಮರಿ, ತನ್ನ ತಾಯಿಯನ್ನು ಎಚ್ಚರಿಸಲು ಪ್ರಯತ್ನಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಖಾಸಗಿ ತೋಟವೊಂದರಲ್ಲಿ ಆನೆಯ ಶವ ಪತ್ತೆಯಾಗಿತ್ತು. ಈ ಬಗ್ಗೆ ರಬ್ಬರ್ ಟ್ಯಾಪರ್ಗಳು ಪೊಲೀಸರಿಗೆ ತಿಳಿಸಿದರು. ಪೊಲೀಸರು ಈ ಮಾಹಿತಿಯನ್ನು ಅರಣ್ಯ ಅಧಿಕಾರಿಗಳಿಗೆ ರವಾನಿಸಿದರು.

‘ತಾಯಿ ಆನೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ. ಆನೆ, ಶ್ವಾಸಕೋಶ ಸಂಬಂಧಿತ ಕಾಯಿಲೆಯಿಂದಾಗಿ ಮೃತಪಟ್ಟಿರುವುದು ಪರೀಕ್ಷೆಯಲ್ಲಿ ತಿಳಿದುಬಂದಿದೆ’ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಯಿರಿ: ಆನೆ ದುರಂತದ ಹಿನ್ನೆಲೆಯಲ್ಲಿ ಸಿಜೆಐಗೆ ಪತ್ರ

‘ಆನೆ ಮರಿ ತನ್ನ ತಾಯಿಯ ಬಳಿ ಯಾರನ್ನು ಬರಲು ಬಿಡುತ್ತಿರಲಿಲ್ಲ. ಮಧ್ಯಾಹ್ನ 12 ಗಂಟೆಯ ಬಳಿಕ ಮರಿಯನ್ನು ಕುತ್ತೂರ್ನಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.