ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

41 ವಿಮಾನನಿಲ್ಧಾಣಗಳಿಗೆ ಬಾಂಬ್‌ ಬೆದರಿಕೆ ಕರೆ

Published 18 ಜೂನ್ 2024, 16:36 IST
Last Updated 18 ಜೂನ್ 2024, 16:36 IST
ಅಕ್ಷರ ಗಾತ್ರ

ನವದೆಹಲಿ: ದೇಶದ 41 ವಿಮಾನ ನಿಲ್ದಾಣಗಳಿಗೆ ಮಂಗಳವಾರ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ರವಾನೆಯಾಗಿದ್ದವು.

ಭದ್ರತಾ ಪಡೆಗಳು ವ್ಯಾಪಕ ತಪಾಸಣೆ ಕೈಗೊಂಡು, ಇವು ಹುಸಿ ಕರೆಗಳು ಎಂಬುದಾಗಿ ಘೋಷಿಸಿದ ನಂತರ ಜನರು ನಿಟ್ಟುಸಿರು ಬಿಡುವಂತಾಯಿತು ಎಂದು ಮೂಲಗಳು ಹೇಳಿವೆ.

ಮಧ್ಯಾಹ್ನ 12.40ರ ಹೊತ್ತಿಗೆ, exhumedyou888@gmail.com ಎಂಬ ಇ–ಮೇಲ್‌ ಐ.ಡಿಯಿಂದ ಈ ಎಲ್ಲ ವಿಮಾನನಿಲ್ದಾಣಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬಂದವು. ಕೂಡಲೇ, ಬಾಂಬ್‌ ಬೆದರಿಕೆ ಮೌಲ್ಯಮಾಪನ ಸಮಿತಿಯ ಶಿಫಾರಸಿನಂತೆ, ಎಲ್ಲ ಟರ್ಮಿನಲ್‌ಗಳಲ್ಲಿ ತಪಾಸಣೆ ಕೈಗೊಳ್ಳಲಾಯಿತು ಎಂದು ಹೇಳಿವೆ.

‘ಕೆಎನ್‌ಆರ್‌ ಎಂಬ ಹೆಸರಿನ ಆನ್‌ಲೈನ್ ಗುಂಪು ಈ ಬೆದರಿಕೆ ಇ–ಮೇಲ್‌ಗಳನ್ನು ಕಳುಹಿಸಿರುವ ಶಂಕೆ ಇದೆ. ಇದೇ ಗುಂಪು, ಮೇ 1ರಂದು ದೆಹಲಿಯ ಹಲವು ಶಾಲೆಗಳಿಗೆ ಇಂತಹ ಬೆದರಿಕೆ ಸಂದೇಶಗಳನ್ನು ಕಳುಹಿಸಿತ್ತು’ ಎಂದೂ ಮೂಲಗಳು ಹೇಳಿವೆ.

ಎಲ್ಲ ವಿಮಾನನಿಲ್ದಾಣಗಳು ಸ್ವೀಕರಿಸಿದ ಸಂದೇಶಗಳು ಒಂದೇ ರೀತಿ ಇದ್ದವು. ‘ಹಲೋ, ವಿಮಾನನಿಲ್ದಾಣದಲ್ಲಿ ಸ್ಫೋಟಕಗಳನ್ನು ಅಡಗಿಸಿ ಇಡಲಾಗಿದೆ. ಈ ಬಾಂಬ್‌ಗಳು ಕೂಡಲೇ ಸ್ಫೋಟಗೊಂಡು ನೀವು ಸಾಯುತ್ತೀರಿ’ ಎಂಬ ಒಕ್ಕಣೆ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT