ನವದೆಹಲಿ: ಮಹಿಳೆಯರ ಸುರಕ್ಷತೆಗಾಗಿ ಮೊಬೈಲ್ ದೂರವಾಣಿಗಳಲ್ಲಿ ತುರ್ತು ಸಹಾಯಕ್ಕೆ ಅಳವಡಿಸುವ ಬಟನ್ ಉತ್ತರ ಪ್ರದೇಶದಲ್ಲಿ ಜನವರಿ 26ರಿಂದ ಪ್ರಾಯೋಗಿಕವಾಗಿ ಆರಂಭವಾಗಲಿದೆ.

ಮೊಬೈಲ್ ದೂರವಾಣಿ ತಯಾರಕರು 2017ರ ಜನವರಿ ಒಳಗೆ ಕಡ್ಡಾಯವಾಗಿ ತುರ್ತು ಸಹಾಯಕ್ಕೆ ಬಟನ್ ಅಳವಡಿಸಬೇಕು ಎಂದು 2016ರ ಏಪ್ರಿಲ್‌ನಲ್ಲಿ ದೂರಸಂಪರ್ಕ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ, ವಿವಿಧ ಕಾರಣಗಳಿಂದ ಈ ವ್ಯವಸ್ಥೆ ಜಾರಿಯಾಗಿರಲಿಲ್ಲ.

ಮೊಬೈಲ್ ದೂರವಾಣಿಗಳಲ್ಲಿನ ತುರ್ತು ಕರೆಯ ಈ ಬಟನ್ 5 ಅಥವಾ 9ರ ಸಂಖ್ಯೆ ಹೊಂದಿರಬೇಕು. ತುರ್ತು ಕರೆ ಮಾಡುವ ವ್ಯವಸ್ಥೆ ಇಲ್ಲದಿರುವ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಇದೇ ಸಂಖ್ಯೆಗಳಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

‘ತುರ್ತು ಸಹಾಯಕ್ಕೆ ಬಟನ್ ಅಳವಡಿಸುವ ಕಾರ್ಯ ಉತ್ತರಪ್ರದೇಶದಲ್ಲಿ ಯಶಸ್ವಿಯಾದರೆ ದೇಶದ ಎಲ್ಲೆಡೆಯೂ ಉತ್ತಮ ಫಲಿತಾಂಶ ದೊರೆಯ
ಲಿದೆ. ಈ ಬಟನ್ ಒತ್ತಿದರೆ ಪೊಲೀಸರ ಜತೆ ತಕ್ಷಣವೇ ಸಂಪರ್ಕ ದೊರೆಯಲಿದೆ’ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ತಿಳಿಸಿದ್ದಾರೆ.

‘ಈ ಮೊದಲು ಪ್ರಾಯೋಗಿಕವಾಗಿ ಈ ಯೋಜನೆ ಕೈಗೊಂಡಾಗ ಬಹುತೇಕ ಕರೆಗಳು ಹುಸಿಯಾಗಿದ್ದವು. ಹೀಗಾಗಿ, ಈ ಯೋಜನೆ ವಿಳಂಬವಾಯಿತು’ ಎಂದು ತಿಳಿಸಿದ್ದಾರೆ.

‘ದೇಶದಲ್ಲಿ ಇನ್ನು ಮುಂದೆ ಹೊಸ ಮೊಬೈಲ್ ದೂರವಾಣಿಗಳಲ್ಲಿ ತುರ್ತು ಸಹಾಯಕ್ಕೆ ಅಳವಡಿಸುವ ಬಟನ್ ಇರಲಿದೆ. ಆದರೆ, ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಮೊಬೈಲ್ ಅಪ್ಲಿಕೇಷನ್ ಡೌನ್‌ಲೌಡ್ ಮಾಡಿಕೊಳ್ಳಬೇಕು. ಇದರಲ್ಲಿ ತುರ್ತು ಸಹಾಯಕ್ಕಾಗಿ ಇರುವ ಬಟನ್ ಒತ್ತಿದರೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ಕಾರ್ಯದರ್ಶಿ ಚೇತನ್ ಸಾಂಘಿ ತಿಳಿಸಿದ್ದಾರೆ.

‘ತುರ್ತು ಸಹಾಯಕ್ಕಾಗಿನ ಬಟನ್‌ಗೆ ಯಾವ ಸಂಖ್ಯೆ ನಮೂದಿಸಬೇಕು ಎನ್ನುವ ಬಗ್ಗೆ ಸರ್ಕಾರ ಇದುವರೆಗೆ ನಿರ್ಧಾರ ಕೈಗೊಂಡಿಲ್ಲ’ ಎಂದು
ಸಾಂಘಿ ತಿಳಿಸಿದ್ದಾರೆ.

ಕಾರ್ಯನಿರ್ವಹಣೆಗೆ ಹೇಗೆ?
ತುರ್ತು ಸಹಾಯಕ್ಕಾಗಿನ ಬಟನ್ ಒತ್ತಿದರೆ ತುರ್ತು ಸಂಖ್ಯೆ 112ಕ್ಕೆ ಐದು ಕರೆಗಳು ಹೋಗುತ್ತವೆ. ಬಳಿಕ, ಐದು ಎಸ್‌ಎಂಎಸ್‌ಗಳು ಪೊಲೀಸ್ ಅಧಿಕಾರಿಗಳಿಗೆ ರವಾನೆಯಾಗುತ್ತವೆ. ಇದೇ ಸಂದರ್ಭದಲ್ಲಿ ಮೂರು ಅಥವಾ ಐದು ಎಸ್‌ಎಂಎಸ್‌ಗಳು ಸಂಕಷ್ಟದಲ್ಲಿ ಸಿಲುಕಿದ ಮಹಿಳೆಯ ಕುಟುಂಬದ ಸದಸ್ಯರ ಮೊಬೈಲ್‌ಗೆ ರವಾನೆಯಾಗುತ್ತವೆ ಎಂದು ಚೇತನ್ ಸಾಂಘಿ ತಿಳಿಸಿದ್ದಾರೆ.

ಘಟನೆ ನಡೆದ ಪ್ರದೇಶದಲ್ಲಿರುವ 25ರಿಂದ 30 ಸ್ವಯಂಸೇವಾ ಕಾರ್ಯಕರ್ತರಿಗೂ ಎಚ್ಚರಿಕೆ ಸಂದೇಶಗಳು ಸಹ ರವಾನೆಯಾಗುತ್ತದೆ. ಈ ಕಾರ್ಯಕರ್ತರನ್ನು ಇಲಾಖೆಯ ಅಧಿಕಾರಿಗಳು ಆಯ್ಕೆ ಮಾಡಿ ತರಬೇತಿ ನೀಡುತ್ತಾರೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.