ಪಟನಾ: ‘ಈ ಸಲದ ಹತ್ತನೇ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಶೂ, ಕಾಲುಚೀಲ ಧರಿಸಿ ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವಂತಿಲ್ಲ ಎಂದು ಬಿಹಾರ ಶಾಲಾ ಪರೀಕ್ಷಾ ಮಂಡಳಿ (ಬಿಎಸ್‌ಇಬಿ) ತಿಳಿಸಿದೆ.

‘ಫೆಬ್ರುವರಿ 21ರಿಂದ ಆರಂಭವಾಗಲಿರುವ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಶೂ ಬದಲಿಗೆ ಚಪ್ಪಲಿ ಧರಿಸಬಹುದು’ ಎಂದು ಬಿಎಸ್‌ಇಬಿ ತಿಳಿಸಿದೆ.

‘ರಾಜ್ಯದಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ನಿಯಮಗಳನ್ನು ಜಾರಿಗೊಳಿಸಲಾಗಿತ್ತು. ಈ ಸಲದ ಹತ್ತನೇ ತರಗತಿ ಪರೀಕ್ಷೆಯಲ್ಲೂ ಇದನ್ನು ಜಾರಿಗೆ ತರಲಾಗಿದೆ ಎಂದು ಬಿಎಸ್‌ಇಬಿ ಮುಖ್ಯಸ್ಥ ಆನಂದ್ ಕಿಶೋರ್ ತಿಳಿಸಿದ್ದಾರೆ.

‘ಪರೀಕ್ಷಾ ಮಂಡಳಿಯ ನಿರ್ಧಾರ ಸರಿಯಾಗಿದೆ. 17 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಎಲ್ಲರನ್ನೂ ತಪಾಸಣೆ ನಡೆಸುವುದು ಕಷ್ಟ ಸಾಧ್ಯ. ಹೀಗಾಗಿ ಮಕ್ಕಳು ಚಪ್ಪಲಿ ಧರಿಸಿದರೆ ಸಮಸ್ಯೆಗೆ ಸರಳವಾದ ಪರಿಹಾರ ’ ಎಂದು ಬಿಹಾರ ಶಿಕ್ಷಣ ಸಚಿವ ಕೃಷ್ಣ ನಂದನ್ ಪ್ರಸಾದ್ ವರ್ಮಾ ಕೂಡ ಸಮರ್ಥಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.