ಗಾಂಧೀನಗರ: ಅಹಮದಾಬಾದ್ನಲ್ಲಿ ಸಂಭವಿಸಿರುವ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಮೃತಪಟ್ಟಿದ್ದಾರೆ. ಬಿಜೆಪಿಯ ಹಲವು ನಾಯಕರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

'ವಿಜಯ್ ರೂಪಾನಿ ಅವರು ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ಗೆ ಹೊರಟಿದ್ದರು' ಎಂದು ತಿಳಿಸಿರುವ ರಾಜ್ಯ ಬಿಜೆಪಿ ನಾಯಕ ಭೂಪೇಂದ್ರಸಿನ್ಹ ಸಿ., ಆಸ್ಪತ್ರೆಗೆ ತೆರಳುತ್ತಿರುವುದಾಗಿ ಹೇಳಿದ್ದಾರೆ.

ಗುಜರಾತ್ನ ಅಹಮದಾಬಾದ್ನಿಂದ ಲಂಡನ್ನತ್ತ ಪ್ರಯಾಣ ಆರಂಭಿಸಿದ್ದ ಏರ್ ಇಂಡಿಯಾ ವಿಮಾನ AI-171 ಇಂದು (ಗುರುವಾರ) ಮಧ್ಯಾಹ್ನ 1.40 ಸುಮಾರಿಗೆ ಪತನಗೊಂಡಿದೆ.

ರೂಪಾನಿ ಅವರು ಲಂಡನ್ನಲ್ಲಿರುವ ಪತ್ನಿಯನ್ನು ನೋಡಲು ಹೋಗುತ್ತಿದ್ದರು ಎನ್ನಲಾಗಿದೆ.

ವಿಮಾನದಲ್ಲಿ 10 ಸಿಬ್ಬಂದಿ ಸೇರಿದಂತೆ ಒಟ್ಟು 242 ಮಂದಿ ಇದ್ದರು. ಯಾರೊಬ್ಬರೂ ಬದುಕುಳಿದಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ವ್ಯಕ್ತಿಯೊಬ್ಬರು ಬದುಕುಳಿದಿದ್ದಾರೆ ಎಂಬ ಸುದ್ದಿಯೂ ಪ್ರಸಾರವಾಗಿದೆ.

5 ವರ್ಷ ಮುಖ್ಯಮಂತ್ರಿ

ವಿಜಯ್ ರೂಪಾನಿ ಅವರು 2017ರ ಆಗಸ್ಟ್ 7ರಿಂದ 2021ರ ಸೆಪ್ಟೆಂಬರ್ 13ರ ವರೆಗೆ (5 ವರ್ಷ, 37 ದಿನ) ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

.ಅಹಮದಾಬಾದ್ನಲ್ಲಿ ವಿಮಾನ ಪತನ: ಇದೇ ಮೊದಲಲ್ಲ, 1988ರಲ್ಲಿ 133 ಜನ ಮೃತಪಟ್ಟಿದ್ದರು.Ahmedabad Plane Crash: ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.