ಬ್ಯಾಂಕಾಕ್: ಥಾಯ್ಲೆಂಡ್ನ ಫುಕೆಟ್ನಿಂದ ಭಾರತದ ದೆಹಲಿಗೆ ಸಂಚರಿಸುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಶುಕ್ರವಾರ ಬಾಂಬ್ ಬೆದರಿಕೆ ಬಂದಿದ್ದು, ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಏರ್ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.
.ಏರ್ ಇಂಡಿಯಾ ವಿಮಾನಪತನ: ತನಿಖೆ ಹೊಣೆ ಎಎಐಬಿ ಹೆಗಲಿಗೆ.
156 ಪ್ರಯಾಣಿಕರಿದ್ದ ‘ಎಐ 379’ ತುರ್ತು ಭೂಸ್ಪರ್ಶ ಮಾಡಿದೆ ಎಂದು ಥಾಯ್ಲೆಂಡ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ 9.30ಕ್ಕೆ ಫುಕೆಟ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ವಿಮಾನ, ಅಂಡಮಾನ್ ಸಮುದ್ರದ ಮೇಲೆ ದೊಡ್ಡದೊಂದು ಸುತ್ತು ಹೊಡೆದು ದಕ್ಷಿಣ ಥಾಯ್ ದ್ವೀಪಕ್ಕೆ ಮರಳಿದೆ ಎಂದು Flightradar24 ತಿಳಿಸಿದೆ.
.ಕ್ಷಿಪಣಿ ದಾಳಿ: ಇಸ್ರೇಲ್ಗೆ ಮೇ 6ರವರೆಗೂ ಏರ್ ಇಂಡಿಯಾ ವಿಮಾನ ಸಂಚಾರ ಸ್ಧಗಿತ.
240ಕ್ಕೂ ಅಧಿಕ ಮಂದಿಯನ್ನು ಬಲಿಪಡೆದ ಅಹಮಾದ್ ವಿಮಾನ ದುರಂತದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಬಾಂಬ್ ಬೆದರಿಕೆ ಬಗ್ಗೆ ಮಾಹಿತಿ ಬಯಸಿ ಏರ್ ಇಂಡಿಯಾವನ್ನು ಸಂಪರ್ಕಿಸಲಾಯಿತದಾರೂ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಕಳೆದ ವರ್ಷ ಭಾರತದ ವಿಮಾನಯಾನ ಕಂಪನಿಗಳಿಗೆ ಹಾಗೂ ಏರ್ಪೋರ್ಟ್ಗಳಿಗೆ ಸುಮಾರು 1 ಸಾವಿರದಷ್ಟು ಹುಸಿ ಬಾಂಬ್ ಬೆದರಿಕೆಗಳು ಬಂದಿದ್ದವು.
.ನಾವು ದುಬಾರಿ ದರ ಪಾವತಿಸುತ್ತೇವೆ: ಏರ್ ಇಂಡಿಯಾ ವಿಮಾನ ವಿಳಂಬಕ್ಕೆ ಸುಪ್ರಿಯಾ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.