ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ವಿಮಾನ AI-171 ಕುರಿತು 'ವಿಮಾನ ಅಪಘಾತ ತನಿಖಾ ಸಂಸ್ಥೆ' (ಎಎಐಬಿ) ತನಿಖೆ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

12 ಸಿಬ್ಬಂದಿ ಸೇರಿದಂತೆ 242 ಮಂದಿ ಇದ್ದ ವಿಮಾನವು ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ಗೆ ಪ್ರಯಾಣ ಆರಂಭಿಸಿತ್ತು. ಇಂದು (ಗುರುವಾರ) ಮಧ್ಯಾಹ್ನ 1.39ಕ್ಕೆ ಟೇಕ್ ಆಫ್ ಆದ ಈ ವಿಮಾನವು ಕೆಲವೇ ಹೊತ್ತಿನಲ್ಲಿ ಮೇಘಾನಿನಗರ್ ಪ್ರದೇಶದಲ್ಲಿ ಪತನಗೊಂಡಿತ್ತು.

ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ, ಆ ಸುದ್ದಿ ಇನ್ನೂ ಖಚಿತವಾಗಿಲ್ಲ.

ಎಎಐಬಿ ಮಹಾನಿರ್ದೇಶಕ ಮತ್ತು ಸಂಸ್ಥೆಯ ತನಿಖಾ ನಿರ್ದೇಶಕ ಸೇರಿದಂತೆ ಇತರರು ಅಹಮದಾಬಾದ್ಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಭಾರತದ ವಾಯು ಪ್ರದೇಶದಲ್ಲಿ ಸಂಭವಿಸುವ ವಿಮಾನಗಳ ಅಪಘಾತ ಮತ್ತು ಗಂಭೀರ ಸ್ವರೂಪದ ಘಟನೆಗಳಿಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳ ವಿಂಗಡನೆಯ ಹೊಣೆ ಎಎಐಬಿಯದ್ದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ

ಅಪಘಾತಗಳ ಕುರಿತು ಸಮಗ್ರ ತನಿಖೆ ನಡೆಸಲಿರುವ ಎಎಐಬಿ, ಸುರಕ್ಷತಾ ಮಾನದಂಡಗಳನ್ನು ಸುಧಾರಿಸಲು ನಿರ್ದೇಶನ ನೀಡಲಿದೆ.
.Ahmedabad Plane Crash: ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಸಾವು.Ahmedabad Plane Crash: ಮಂಗಳೂರು ದುರಂತ ಸೇರಿದಂತೆ ಪ್ರಮುಖ ವಿಮಾನ ಅಪಘಾತಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.