ನವದೆಹಲಿ (ಪಿಟಿಐ): ಭಾರತ ಮತ್ತು ಇಸ್ರೇಲ್‌ನ ಟೆಲ್ ಅವೀವ್ ನಡುವಿನ ವಿಮಾನ ಸಂಚಾರ ಸ್ಥಗಿತವನ್ನು ಅಕ್ಟೋಬರ್ 18ರ ವರೆಗೆ ವಿಸ್ತರಿಸುವುದಾಗಿ ಏರ್ ಇಂಡಿಯಾ ತಿಳಿಸಿದೆ.
ಆದರೆ, ಇಸ್ರೇಲ್‌ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ಭಾಗವಾಗಿ ಸಂಸ್ಥೆಯ ವಿಮಾನಗಳು ಸಂಚಾರ ನಡೆಸುತ್ತಿವೆ ಎಂದು ಏರ್ ಇಂಡಿಯಾದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ಕಾರಣ ವಿಮಾನ ಸಂಚಾರವನ್ನು ಅ.14ರ ವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ಇದಕ್ಕೂ ಮೊದಲು ತಿಳಿಸಿತ್ತು.
ಸಾಮಾನ್ಯವಾಗಿ ಭಾರತದಿಂದ ಟೆಲ್ ಅವೀವ್‌ಗೆ ವಾರದಲ್ಲಿ ಐದು ದಿವಸ ಏರ್ ಇಂಡಿಯಾ ವಿಮಾನಗಳು ಸಂಚರಿಸುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.