ನವದೆಹಲಿ: ‘ಮುಖ್ಯಮಂತ್ರಿ ಆತಿಶಿ ಅವರನ್ನು ಬಿಜೆಪಿಯ ಆದೇಶದ ಮೇರೆಗೆ ಕೇಂದ್ರದ ತನಿಖಾ ಏಜೆನ್ಸಿಗಳು ‘ನಕಲಿ’ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆಯಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.

ನಮ್ಮ ಸರ್ಕಾರ ಜಾರಿಗೆ ತಂದಿರುವ ‘ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆ’ ನಿಲ್ಲಿಸಲು ಬಿಜೆಪಿ ಈ ಪ್ರಯತ್ನಕ್ಕೆ ಕೈಹಾಕಿದೆ ಎಂದು ಅವರು ದೂರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ‘ಬಿಜೆಪಿ ನಿರ್ದೇಶನದ ಮೇರೆಗೆ ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸಭೆ ನಡೆದಿದೆ. ಬಂಧನಕ್ಕೆ ಮೇಲಿನವರಿಂದ ಸೂಚನೆಗಳು ಬಂದಿರುವ ಮಾಹಿತಿ ಮೂಲಗಳಿಂದ ನಮಗೆ ಗೊತ್ತಾಗಿದೆ’ ಎಂದು ಹೇಳಿದ್ದಾರೆ.

‘ಆತಿಶಿ ಅವರ ವಿರುದ್ಧ ಸಾರಿಗೆ ಇಲಾಖೆಯಲ್ಲಿ ನಕಲಿ ಪ್ರಕರಣ ರೂಪಿಸುತ್ತಿರುವುದು ಮೂಲಗಳಿಂದ ನಮಗೆ ಗೊತ್ತಾಗಿದೆ. ಬಂಧನಕ್ಕೂ ಮೊದಲು ಆತಿಶಿ ಮತ್ತು ಎಎಪಿಯ ಇತರ ಹಿರಿಯ ನಾಯಕರ ಮೇಲೆ ದಾಳಿ ನಡೆಸುವ ಯೋಜನೆಯೂ ಅವರಿಗಿದೆ. ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸದಂತೆ ಎಎಪಿ ನಾಯಕತ್ವಕ್ಕೆ ಅಡ್ಡಿಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ’ ಎಂದು ಸರಣಿ ಆರೋಪ ಮಾಡಿದ್ದಾರೆ.

‘ನಾನು ಬದುಕಿರುವವರೆಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಯೋಜನೆ ನಿಲ್ಲಿಸಲು ಬಿಡುವುದಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಎಎಪಿ, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ.

ಬಿಜೆಪಿಯಿಂದ ನಗದು ಹಂಚಿಕೆ ಆತಿಶಿ ಆರೋಪ

ಅರವಿಂದ ಕೇಜ್ರಿವಾಲ್ ಅವರು ಪ್ರತಿನಿಧಿಸುವ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ವಿಧಾನಸಭಾ ಚುನಾವಣೆಗೂ ಮುನ್ನ ಮಹಿಳೆಯರಿಗೆ ನಗದು ಹಂಚುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಬುಧವಾರ ಆರೋಪಿಸಿದ್ದಾರೆ.

ವಿಂಡ್ಸರ್ ಪ್ಲೇಸ್ನಲ್ಲಿರುವ ಬಿಜೆಪಿಯ ಮಾಜಿ ಸಂಸದ ಪರ್ವೇಶ್ ವರ್ಮಾ ಅವರ ನಿವಾಸದಲ್ಲಿ ಕೊಳೆಗೇರಿ ನಿವಾಸಿ ಮಹಿಳಾ ಮತದಾರರಿಗೆ ಅವರ ಮತದಾರ ಗುರುತಿನ ಚೀಟಿ ವಿವರ ಪಡೆದು, ತಲಾ ₹1,100 ನೀಡಲಾಗಿದೆ ಎಂದು ಆತಿಶಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಕೋಟ್ಯಂತರ ರೂಪಾಯಿ ಇರಿಸಲಾಗಿರುವ ಬಂಗಲೆಯ ಮೇಲೆ ದೆಹಲಿ ಪೊಲೀಸರು, ಸಿಬಿಐ, ಇ.ಡಿ ದಾಳಿ ನಡೆಸಬೇಕು ಮತ್ತು ವರ್ಮಾ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿರುವ ಅವರು, ಪೊಲೀಸರು ಮತ್ತು ಚುನಾವಣಾ ಆಯೋಗಕ್ಕೆ ಪಕ್ಷವು ಈ ಬಗ್ಗೆ ದೂರು ನೀಡಲಿದೆ ಎಂದರು.

ಆರೋಪಗಳನ್ನು ನಿರಾಕರಿಸಿರುವ ವರ್ಮಾ, ‘ದಿವಂಗತರಾದ ನಮ್ಮ ತಂದೆ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರು ಕಟ್ಟಿದ್ದ ಎನ್ಜಿಒ ‘ರಾಷ್ಟ್ರೀಯ ಸ್ವಾಭಿಮಾನ್’ ಅಭಿಯಾನದ ಭಾಗವಾಗಿ, ಸಮಾಜದ ಬಡ ವರ್ಗಗಳ ಮಹಿಳೆಯರಿಗೆ ತಿಂಗಳಿಗೆ ₹1,100 ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯೋಜನೆಗಳು ಅಸ್ತಿತ್ವದಲ್ಲಿಲ್ಲ: ನೋಟಿಸ್ ಪ್ರಕಟಿಸಿದ ಇಲಾಖೆಗಳು

ಆಡಳಿತಾರೂಢ ಎಎಪಿಯು ಘೋಷಿಸಿರುವ ಮಹಿಳೆಯರಿಗೆ ₹2,100 ಮತ್ತು ವೃದ್ಧರಿಗೆ ಉಚಿತ ಚಿಕಿತ್ಸೆ ನೀಡುವ ಯೋಜನೆಗಳು ಪ್ರಸ್ತುತ ಅಸ್ತಿತ್ವದಲ್ಲಿಲ್ಲ. ಜನರನ್ನು ಸೇರಿಸುವ ನೆಪದಲ್ಲಿ ಇಂತಹ ಯೋಜನೆಗಳಿಗೆ ವಿವರಗಳನ್ನು ಸಂಗ್ರಹಿಸುವುದು ವಂಚನೆ ಎಂದು ದೆಹಲಿ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆರೋಗ್ಯ ಇಲಾಖೆಗಳು ಬುಧವಾರ ಸಾರ್ವಜನಿಕ ತಿಳಿವಳಿಕೆ ಪತ್ರ ಪ್ರಕಟಿಸಿವೆ.

ಎರಡೂ ಇಲಾಖೆಗಳು ಹೊರಡಿಸಿರುವ ನೋಟಿಸ್ಗಳಲ್ಲಿ, ‘ಅಸ್ತಿತ್ವದಲ್ಲಿಲ್ಲದ ಯೋಜನೆಗಳಿಗೆ ನೋಂದಣಿ ನೆಪದಲ್ಲಿ ಯಾರಿಗಾದರೂ ವೈಯಕ್ತಿಕ ವಿವರಗಳನ್ನು ನೀಡುವುದು ಸರಿಯಲ್ಲ. ಅಂತಹ ಮಾಹಿತಿಯನ್ನು ಸಂಗ್ರಹಿಸಲು ವ್ಯಕ್ತಿ ಅಥವಾ ಪಕ್ಷಕ್ಕೆ ಯಾವುದೇ ಅಧಿಕಾರವಿಲ್ಲ. ಹಾಗೆ ಮಾಡಿದರೆ ಅದು ವಂಚನೆಯಾಗುತ್ತದೆ. ಈ ಬಗ್ಗೆ ಜನರು ಎಚ್ಚರವಾಗಿರಬೇಕು’ ಎಂದು ಹೇಳಿದೆ.

ಅಧಿಕಾರಿಗಳ ವಿರುದ್ಧ ಕ್ರಮ: ಸಿ.ಎಂ

‘ಯೋಜನೆಗಳ ಬಗ್ಗೆ ಸಂಪುಟದ ಅಧಿಸೂಚನೆಯು ಸಾರ್ವಜನಿಕ ವಾಗಿಯೂ ಲಭ್ಯವಿದೆ. ಆದರೆ, ಈ ರೀತಿ ನೋಟಿಸ್ ನೀಡಿದವರು ಆಡಳಿತಾತ್ಮಕ ಮತ್ತು ಪೊಲೀಸ್ ಕ್ರಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ದೆಹಲಿ ಮುಖ್ಯಮಂತ್ರಿ ಆತಿಶಿ ಎಚ್ಚರಿಕೆ ನೀಡಿದ್ದಾರೆ.

‘ಇವು ಕೇಜ್ರಿವಾಲ್ ಅವರ ಖಾತರಿಗಳು. ಬಿಜೆಪಿಯ ಒತ್ತಡದ ಮೇರೆಗೆ ಈ ಅಧಿಕಾರಿಗಳು ಈ ನೋಟಿಸ್ಗಳನ್ನು ನೀಡಿದ್ದಾರೆ’ ಎಂದು ಅವರು ಹೇಳಿದರು. ‘ಇದು ಎಎಪಿ ಭರವಸೆ ಮತ್ತು ಅದರ ಕಾರ್ಯಕರ್ತರು ಯೋಜನೆಗೆ ಜನರನ್ನು ನೋಂದಾಯಿಸಿಕೊಳ್ಳುತ್ತಾರೆ’ ಎಂದು ಕೇಜ್ರಿವಾಲ್ ಹೇಳಿದರು.

ಆರೋಪ ಅಲ್ಲಗಳೆದ ಬಿಜೆಪಿ: ಎಎಪಿ ನಾಯಕರ ಆರೋಪಗಳನ್ನು ನಿರಾಧಾರ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ. ‘ದೆಹಲಿ ಸರ್ಕಾರದ ಎರಡು ಇಲಾಖೆಗಳು ಸಾರ್ವಜನಿಕ ನೋಟಿಸ್ ಪ್ರಕಟಿಸಿದ ನಂತರ ಕೇಜ್ರಿವಾಲ್ ಸಮತೋಲನ ಕಳೆದುಕೊಂಡಿದ್ದಾರೆ’ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.