ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ‘ನುಸುಳುಕೋರ’ ಎಂದು ಕರೆದಿದ್ದು, ಅವರನ್ನು ಉತ್ತರಾಖಂಡಕ್ಕೆ ವಾಪಸ್ ಕಳುಹಿಸಬೇಕು ಎಂದು ಹೇಳಿದ್ದಾರೆ.

ಲಖನೌದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ಬಿಜೆಪಿಯ ಬಳಿ ಇರುವ ಅಂಕಿಅಂಶಗಳು ನಕಲಿಯಾಗಿವೆ. ಅವರ ಅಂಕಿಅಂಶ ನಂಬುವವರು ದಾರಿ ತಪ್ಪುತ್ತಾರೆ’ ಎಂದು ಟೀಕಿಸಿದ್ದಾರೆ.

‘ಬಿಜೆಪಿಯವರು ವಲಸಿಗರ ಕುರಿತು ತಪ್ಪು ಅಂಕಿಅಂಶ ನೀಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲೂ ನಾವು ನುಸುಳುಕೋರರನ್ನು ಕಾಣಬಹುದು. ಮುಖ್ಯಮಂತ್ರಿ (ಯೋಗಿ) ಅವರು ಉತ್ತರಾಖಂಡದವರು. ಅವರನ್ನು ಉತ್ತರಾಖಂಡಕ್ಕೆ ಕಳುಹಿಸಬೇಕೆಂದು ನಾವು ಬಯಸುತ್ತೇವೆ. ಸೈದ್ಧಾಂತಿಕ ದೃಷ್ಟಿಕೋನದಿಂದಲೂ ಅವರೊಬ್ಬರು ನುಸುಳುಕೋರ’ ಎಂದಿದ್ದಾರೆ.

‘ಆದಿತ್ಯನಾಥ ಅವರು ಬಿಜೆಪಿಯ ಸದಸ್ಯರಾಗಿರಲಿಲ್ಲ. ಅವರು ಇನ್ನೊಂದು ಪಕ್ಷದ ಸದಸ್ಯರಾಗಿದ್ದರು. ಪಕ್ಷಕ್ಕೆ ಒಳನುಸುಳಿದ ಅವರನ್ನು ಯಾವಾಗ ಹೊರಹಾಕಲಾಗುತ್ತದೆ’ ಎಂದೂ ಪ್ರಶ್ನಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನುಸುಳುಕೋರರ ಬಗ್ಗೆ ಹೇಳಿಕೆ ನೀಡಿದ್ದರ ಬೆನ್ನಲ್ಲೇ ಅಖಿಲೇಶ್ ಅವರು ಈ ಮಾತುಗಳನ್ನಾಡಿದ್ದಾರೆ.

‘ಕೆಲವು ರಾಜಕೀಯ ಪಕ್ಷಗಳು ನುಸುಳುಕೋರರನ್ನು ಮತಬ್ಯಾಂಕ್ ಆಗಿ ಪರಿಗಣಿಸುತ್ತಿವೆ. ಗುಜರಾತ್ ಮತ್ತು ರಾಜಸ್ಥಾನದ ಗಡಿಗಳಲ್ಲಿ ಒಳನುಸುಳುವಿಕೆ ಏಕೆ ನಡೆಯುವುದಿಲ್ಲ’ ಎಂದು ಅಮಿತ್ ಶಾ ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.