ಪ್ರಯಾಗರಾಜ: ಸಂಭಲ್ ಜಿಲ್ಲೆಯಲ್ಲಿರುವ ಮೊಘಲ್ ಕಾಲದ ಮಸೀದಿಯೊಂದರ ಸಮೀಕ್ಷೆ ವೇಳೆ ನಡೆದ ಗಲಭೆ ಸಂಬಂಧ ಸಮಾಜವಾದಿ ಪಕ್ಷದ ಸಂಸದ ಝಿಯಾವುರ್ ರೆಹಮಾನ್ ಬರಖ್ ಅವರ ಬಂಧನಕ್ಕೆ ಅಲಹಾಬಾದ್ ಹೈಕೋರ್ಟ್ ತಡೆ ನೀಡಿದೆ. ಆದರೆ ಅವರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು ರದ್ದು ಮಾಡಲು ನಿರಾಕರಿಸಿದೆ.
.ಉತ್ತರ ಪ್ರದೇಶ | ‘ವಿದ್ಯುತ್ ಕಳ್ಳತನ’: ಸಂಭಲ್ ಸಂಸದನಿಗೆ ₹1.91 ಕೋಟಿ ದಂಡ.
ನ್ಯಾಯಮೂರ್ತಿಗಳಾದ ರಾಜೀವ್ ಗುಪ್ತಾ ಹಾಗೂ ಅಝರ್ ಹಸನ್ ಇದ್ರೀಸಿ ಅವರಿದ್ದ ಪೀಠವು ಬರಖ್ ಅವರ ಅರ್ಜಿಯ ವಿಚಾರಣೆ ನಡೆಸಿತು. ಬರಖ್ ಪರ ವಕೀಲ ಇಮ್ರಾನುಲ್ಲಾ ಹಾಜರಾದರು.

ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶಿಸಿದ ಬಳಿಕ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಬರಖ್ ವಿರುದ್ಧ ಸಂಭಲ್ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದರು. ಹಿಂಸಾಚಾರದಲ್ಲಿ ನಾಲ್ವರು ಸಾವಿಗೀಡಾಗಿದ್ದರು.
.ಸಂಭಲ್ ಹಿಂಸಾಚಾರ ಪೂರ್ವಯೋಜಿತ ಕೃತ್ಯ: ಲೋಕಸಭೆಯಲ್ಲಿ ಅಖಿಲೇಶ್ ಯಾದವ್.
ಬರಖ್ ವಿರುದ್ಧ ನಡೆಯುತ್ತಿರುವ ವಿಚಾರಣೆ ಮುಂದುವರಿಯಲಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ವಿಚಾರಣೆಗೆ ಸಹಕರಿಸುವಂತೆ ಬರಖ್ ಅವರಿಗೆ ಸೂಚಿಸಿದೆ.
.ಸಂಭಲ್ ಹಿಂಸಾಚಾರ: ವಿಕಿಪೀಡಿಯ ವಿರುದ್ಧ ಅಮಿತ್ ಮಾಳವೀಯಾ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.