ಚೆನ್ನೈ: ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪಯ್ಯಮೋಳಿ ಹಾಗೂ ಅವರ ಬೆಂಗಾವಲು ಪಡೆಯ ವಾಹನ ಸಂಚಾರಕ್ಕಾಗಿ ಆಂಬುಲೆನ್ಸ್ ಅನ್ನು ಪೊಲೀಸರು ತುಸು ಹೊತ್ತು ತಡೆದು ನಿಲ್ಲಿಸಿದ ಘಟನೆ ತಮಿಳುನಾಡಿನ ಕುಂಬಕೋಣಂನಲ್ಲಿ ನಡೆದಿದೆ.

ಸೈರನ್ ಮೊಳಗಿಸುತ್ತಾ ಬಂದ ಆಂಬುಲೆನ್ಸ್ ಅನ್ನು ಪೊಲೀಸರು ತಡೆದಿರುವ ವಿಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಸಚಿವ ಅನ್ಬಿಲ್ ಮಹೇಶ್ ಪಯ್ಯಮೋಳಿ ಅವರು ಸಂಚರಿಸುತ್ತಿದ್ದಾರೆ ಎನ್ನಲಾದ ಕಾರು ಹಾದುಹೋಗುವಾಗ ಪೊಲೀಸ್ ಕಾನ್‌ಸ್ಟೇಬಲ್ ಸಲ್ಯೂಟ್ ನೀಡುತ್ತಿರುವ ದೃಶ್ಯವೂ ವಿಡಿಯೊದಲ್ಲಿದೆ.

ಬಿಹಾರ ರಾಜಕಾರಣದಲ್ಲಿ ಬದಲಾವಣೆ ಸುಳಿವು?: ಸೋನಿಯಾ ಜತೆ ನಿತೀಶ್ ಕುಮಾರ್ ಮಾತುಕತೆ

ಬೆಂಗಾವಲು ವಾಹನಗಳು ತೆರಳುವ ವರೆಗೂ ಆಂಬುಲೆನ್ಸ್ ಸೇರಿದಂತೆ ಹತ್ತಾರು ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು.

ಆಂಬುಲೆನ್ಸ್ ತಡೆದು ನಿಲ್ಲಿಸಿದ ವಿಚಾರವಾಗಿ ಆಡಳಿತಾರೂಢ ಡಿಎಂಕೆ ವಿರುದ್ಧ ಪ್ರತಿಪಕ್ಷ ಎಐಎಡಿಎಂಕೆ ವಾಗ್ದಾಳಿ ನಡೆಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.