ರಾಯಪುರ: ಎಡರಂಗದ ತೀವ್ರವಾದಿತನ (ಎಲ್ಡಬ್ಲ್ಯೂಇ) ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಹಾಗೂ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ಛತ್ತೀಸಗಢದಲ್ಲಿ ಎಡರಂಗದ ತೀವ್ರವಾದಿತನ ಪರಿಸ್ಥಿತಿಯ ಕುರಿತು ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
.ತುಳಸಿ ಗೌಡ ನಿಧನ: ಮರಗಳೊಂದಿಗೆ ಅಮರವಾದರು....ಕಾರಿನ ಬಾಗಿಲಿಗೆ ವ್ಯಕ್ತಿಯ ಹೆಬ್ಬೆರಳು ಸಿಲುಕಿದ್ದರೂ ಅರ್ಧ ಕಿ.ಮೀ. ಎಳೆದೊಯ್ದರು!.
‘2026ರ ಮಾರ್ಚ್ ಅಂತ್ಯಕ್ಕೆ ಎಲ್ಡಬ್ಲ್ಯುಇ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ ಪೊಲೀಸರು, ಭದ್ರತಾ ಪಡೆಗಳು, ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.

ಕಳೆದ ಒಂದು ವರ್ಷದಿಂದ ಉಗ್ರವಾದಿಗಳನ್ನು ಮಟ್ಟ ಹಾಕುವ ಅನೇಕ ಕಾರ್ಯಾಚರಣೆಗಳು ನಡೆದಿದ್ದು, ಇದು ಬಹುದೊಡ್ಡ ಯಶಸ್ಸು. 2026ರ ವೇಳೆಗೆ ಎಲ್ಡಬ್ಲ್ಯೂಇ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮತ್ತಷ್ಟು ಕಾರ್ಯಾಚರಣೆ, ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಸಿಆರ್ಪಿಎಫ್, ಐಟಿಬಿಪಿ, ಬಿಎಸ್ಎಫ್, ಛತ್ತೀಸ್ಗಢ ಪೊಲೀಸ್ ಮತ್ತು ಡಿಆರ್ಜಿ ಗುರಿಯನ್ನು ಸಾಧಿಸುವತ್ತ ಸಾಗಿವೆ. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾತ್ರವೂ ಗಮನರ್ಹವಾಗಿದೆ ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.
.ದಿಸ್ಸನಾಯಕೆ–ಮೋದಿ ಮಾತುಕತೆ; ಶ್ರೀಲಂಕಾ ಸೇನೆಗೆ ಭಾರತದ ಸಹಕಾರ.ಅಮೆರಿಕ |ವಿಸ್ಕಾನ್ಸಿನ್ ಶಾಲೆಯಲ್ಲಿ ಗುಂಡಿನ ದಾಳಿ: ಶಂಕಿತ ಶೂಟರ್ ಸೇರಿ ಮೂವರ ಸಾವು.ಚಳಿಗಾಲದ ಅಧಿವೇಶನ: ರಾತ್ರಿ 1ರ ಬಳಿಕವೂ ನಡೆದ ವಿಧಾನಸಭೆ ಕಲಾಪ.ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.