ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳೊಂದಿಗೆ ಅಮಿತ್‌ ಶಾ ಸಂವಾದ

Published 14 ಅಕ್ಟೋಬರ್ 2023, 15:43 IST
Last Updated 14 ಅಕ್ಟೋಬರ್ 2023, 15:43 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಕೇಂದ್ರ ಗೃಹ ಸಚಿವ ಮತ್ತು ಗಾಂಧಿನಗರ ಸಂಸದ ಅಮಿತ್‌ ಶಾ ಅವರು ತಮ್ಮ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳೊಂದಿಗೆ ಶನಿವಾರ ಸಂವಾದ ನಡೆಸಿದರು. 

ಬಳಿಕ ಅವರು ಭಾರತ–ಪಾಕಿಸ್ತಾನ ವಿಶ್ವಕಪ್‌ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿದರು.

‘ಕ್ಷೇತ್ರದ ಸಂಸದನಾಗಿ, ಶ್ರೀಮಂತ ಕುಟುಂಬಗಳ ಮಕ್ಕಳಿಗೆ ಲಭ್ಯವಾಗುವ ಸೌಲಭ್ಯಗಳು ಅಂಗನವಾಡಿ ಮಕ್ಕಳಿಗೂ ಲಭ್ಯವಾಗುತ್ತಿವೆಯೇ ಎಂದು ಪರಿಶೀಲಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.

‘ನನ್ನ ಲೋಕಸಭಾ ಕ್ಷೇತ್ರದ ಅಂಗನವಾಡಿ ಕೇಂದ್ರಗಳ ಮಕ್ಕಳೊಂದಿಗೆ ಗೇಮಿಂಗ್‌ ವಲಯಕ್ಕೆ ತೆರಳಿದ್ದೆ. ಇಲ್ಲಿ ಮಕ್ಕಳು ಅವರ ಇಷ್ಟದ ಆಟಗಳನ್ನು ಆಡುತ್ತಾ ಖುಷಿಪಟ್ಟರು. ಮಕ್ಕಳ ಉಲ್ಲಾಸ ಕಂಡು ಹೃದಯ ತುಂಬಿ ಬಂತು. ಅಂಗನವಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ, ಪೌಷ್ಠಿಕ ಆಹಾರ ಹಾಗೂ ಆಟಿಕೆಗಳನ್ನು ನೀಡಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT