ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಲ್ಕ್ಯಾರಾ ಸುರಂಗದಿಂದ ಹೊರಬಂದ ಮೋತಿಪುರದ ಕಾರ್ಮಿಕರು: ಮತ್ತೊಮ್ಮೆ ದೀಪಾವಳಿ

Published 30 ನವೆಂಬರ್ 2023, 4:41 IST
Last Updated 30 ನವೆಂಬರ್ 2023, 4:41 IST
ಅಕ್ಷರ ಗಾತ್ರ

ಶರಾವಸ್ತಿ, (ಉತ್ತರ ಪ್ರದೇಶ):  ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು ಸುರಕ್ಷಿತವಾಗಿ ಹೊರಬಂದ ದ್ದನ್ನು ಇಲ್ಲಿಯ ಮೋತಿಪುರ ಗ್ರಾಮಸ್ಥರು ಮಂಗಳವಾರ ರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುರಂಗದಿಂದ ಹೊರಬಂದ 41 ಕಾರ್ಮಿಕರಲ್ಲಿ ಈ ಗ್ರಾಮದ ಆರು ಮಂದಿಯೂ ಇದ್ದದ್ದು ಈ ಸಂಭ್ರಮಕ್ಕೆ ಕಾರಣ. 

ರಾಮ್‌ ಮಿಲನ್‌, ಅಂಕಿತ್‌, ಸತ್ಯದೇವ್‌, ಸಂತೋಷ್‌, ಜೈಪ್ರಕಾಶ್‌ ಮತ್ತು ರಾಮ್ ಸುಂದರ್ ಅವರು ಸುರಕ್ಷಿತವಾಗಿ ಮರಳುವುದನ್ನು ಗ್ರಾಮಸ್ಥರು ಕಾತುರದಿಂದ ಎದುರು ನೋಡುತ್ತಿದ್ದರು. ಅವರ ಸುರಂಗದಿಂದ ಹೊರಬಂದಿದ್ದಾರೆ ಎಂದು ತಿಳಿಯುತ್ತಿದ್ದಂತೆ ಎರಡನೇ ಬಾರಿಗೆ ದೀಪಾವಳಿ ಆಚರಿಸಿದರು. 

‘ಆರು ಮಂದಿ ಸುರಂಗದಿಂದ ಹೊರಬಂದ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ತಮ್ಮ ಮನೆಗಳಿಂದ ಹೊರ ಬಂದು ಅಭಿನಂದಿಸಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಅವರೆಲ್ಲರೂ ಗ್ರಾಮಕ್ಕೆ ಮರಳಿದ ಬಳಿಕವೂ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮತ್ತೊಮ್ಮೆ ದೀಪಾವಳಿ ಆಚರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ’ ಎಂದು ರಾಮ್ ಮಿಲನ್‌ ಅವರ ಮಗ ಸಂದೀಪ್‌ ಕುಮಾರ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT