ಲಖನೌ: ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ನಾಯಕಿ ಮಾಯಾವತಿ, ಮುಂಬರುವ ದಿನಗಳಲ್ಲಿ ಬಿಎಸ್‌ಪಿ ವಿರೋಧಿ ಶಕ್ತಿಗಳು ಒಂದಾಗಲಿವೆ ಎಂದು ಕಿಡಿಕಾರಿದ್ದಾರೆ.

ಬಿಜೆಪಿಯ ಮತಗಳಿಕೆ ಪ್ರಮಾಣಶೇ.40ರಷ್ಟು ಹೆಚ್ಚಾಗಲಿದೆ ಎಂದುಸಮೀಕ್ಷೆ ಹೇಳಿದೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಯಾವತಿ,ʼಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಎಸ್‌ಪಿ ವಿರೋಧಿ ಶಕ್ತಿಗಳ ಪಿತೂರಿ ಕೆಳಮಟ್ಟಕ್ಕಿಳಿಯಲಿದೆ ಮತ್ತು ಬಿರುಸು ಪಡೆಯಲಿದೆ. ಪ್ರತಿ ಚುನಾವಣೆಗಳ ಮೊದಲು ನಡೆದಂತೆಯೇ ಇರುತ್ತದೆʼ ಎಂದಿದ್ದಾರೆ. ಹಾಗೆಯೇ, ಬಿಜೆಪಿಯು ರಾಜ್ಯದಲ್ಲಿ ʼಹಗೆತನದ ವಾತಾವರಣʼ ಸೃಷ್ಟಿಸಲಿದೆ ಎಂದು ಆರೋಪಿಸಿದ್ದಾರೆ.

ಮುಂದುವರಿದು,ʼಬಿಎಸ್‌ಪಿಯು ರಾಜ್ಯದಲ್ಲಿ ಬಲಿಷ್ಠವಾಗಿರುವುದರಿಂದ ಬಿಜೆಪಿಯ ಪಿತೂರಿಗಳ ಬಗ್ಗೆ ಹೆದರುವುದಿಲ್ಲ ಅಥವಾ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲʼ ಎಂದಿದ್ದಾರೆ.

ʼಬಿಜೆಪಿಯದ್ವೇಷ ಮತ್ತು ಪಕ್ಷಪಾತದ ಧೋರಣೆಯಿಂದ ಬೇಸತ್ತು ದಲಿತರು, ಬುಟಕಟ್ಟು ಜನರು, ಹಿಂದುಳಿದವರು, ಮುಸ್ಲೀಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದವರೂ.. ಮುಖ್ಯವಾಗಿ ಬ್ರಾಹ್ಮಣರು, ಬಿಎಸ್‌ಪಿ ಜೊತೆಗೂಡುತ್ತಿದ್ದಾರೆʼ ಎಂದಿದ್ದಾರೆ.

ಬಿಜೆಪಿಯುʼದೋಷಪೂರಿತನೀತಿʼಗಳನ್ನು ಜಾರಿಗೊಳಿಸುತ್ತಿದೆ. ಇದುದೇಶದಲ್ಲಿ ಬಡತನ,ಹಣದುಬ್ಬರ ಮತ್ತು ಹಿಂಸಾಚಾರಹೆಚ್ಚಾಗಲು ಕಾರಣವಾಗುತ್ತದೆ ಎಂದು ಬುಧವಾರ ಆರೋಪಿಸಿದ್ದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ಮುಂದಿನವರ್ಷ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ.ಬಿಎಸ್‌ಪಿ, ಸೆಪ್ಟೆಂಬರ್ 7ರಿಂದ ಪ್ರಚಾರ ಆರಂಭಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.