ಢಾಕಾ: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಅವರು ಶುಕ್ರವಾರ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿ, ಬಾಂಗ್ಲಾದೇಶದ ರಾಷ್ಟ್ರಪಿತ, ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಬಾಂಗ್ಲಾದೇಶಕ್ಕೆ ಐದು ದಿನಗಳ ಪ್ರವಾಸ ಕೈಗೊಂಡಿರುವ ಜನರಲ್ ಎಂ.ಎಂ. ನರವಣೆ ಅವರು, ಪತ್ನಿ ವೀಣಾ ನರವಣೆಯೊಂದಿಗೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಿದರು.

‘ಬಾಂಗ್ಲಾದೇಶದಲ್ಲಿರುವ ಬಂಗಬಂಧು ಸ್ಮಾರಕ ವಸ್ತುಸಂಗ್ರಹಾಲಯಕ್ಕೆಜನರಲ್ ಎಂ.ಎಂ. ನರವಣೆ ಮತ್ತು ಅವರ ಪತ್ನಿ ಭೇಟಿ ನೀಡಿದರು. ಈ ವಸ್ತುಸಂಗ್ರಹಾಲಯವು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬಂಗಬಂಧುವಿನ ಜೀವನ ಮತ್ತು ಹೋರಾಟದ ಸಂಕೇತವಾಗಿದೆ’ ಎಂದು ಭಾರತೀಯ ಸೇನೆಯ ಎಡಿಜಿ (ಸಾರ್ವಜನಿಕ ಸಂಪರ್ಕ) ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.