ಜೊರ‍್ರಾಟ್(ಅಸ್ಸಾಂ): ಅಸ್ಸಾಂನ ಜೊರ‍್ರಾಟ್ ಜಿಲ್ಲೆಯ ಟೀ ಎಸ್ಟೇಟ್ ಬಳಿ 2019ರ ಆಗಸ್ಟ್ 31ರಂದು 73 ವರ್ಷದ ವೈದ್ಯಾಧಿಕಾರಿ ಮೇಲೆ ನಡೆದಿದ್ದ ಗುಂಪು ಹಲ್ಲೆ, ಹತ್ಯೆ ಪ್ರಕರಣದ ಸಂಬಂಧ ಜಿಲ್ಲಾ ನ್ಯಾಯಾಲಯ 25 ಜನರನ್ನು ಅಪರಾಧಿ ಎಂದು ಘೋಷಿಸಿದೆ.

ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಬಿನ್ ಫುಕನ್ ಅವರು, ಐಪಿಸಿ ಮತ್ತು ಅಸ್ಸಾಂ ವೈದ್ಯಕೀಯ ಸೇವೆ ಸಿಬ್ಬಂದಿ, ಸಂಸ್ಥೆಗಳ (ಹಿಂಸೆ, ಹಾನಿ ವಿರುದ್ಧ ರಕ್ಷಣೆ) ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿ ಶಿಕ್ಷೆ ವಿಧಿಸಲಾಗಿದೆ ಎಂದು ಪ್ರಕಟಿಸಿದರು.

ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣ ಕುರಿತ ವಿವರಗಳನ್ನು ಅಕ್ಟೋಬರ್ 19ರಂದು ಪ್ರಕಟಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆರೋಪಿಗಳಲ್ಲಿ ಒಬ್ಬಾತ ವಿಚಾರಣೆ ಅವಧಿಯಲ್ಲಿ ಮೃತಪಟ್ಟಿದ್ದು, ಆತನ ವಿರುದ್ಧದ ಆದೇಶ ಕಾಯ್ದಿರಿಸಲಾಗಿದೆ.

ಆ. 31ರಂದು ಹಿರಿಯ ವೈದ್ಯಾಧಿಕಾರಿ ಡೆಬೆನ್ ದತ್ತಾ ಅವರ ಮೇಲೆ ಗುಂಪು ದಾಳಿ ನಡೆಸಿದ್ದು, ತೀವ್ರವಾಗಿ ಹಲ್ಲೆ ಮಾಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವೈದ್ಯಾಧಿಕಾರಿ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಗುಂಪು ಆಸ್ಪತ್ರೆಯಲ್ಲೂ ದಾಂದಲೆ ನಡೆಸಿತ್ತು.

ಆದೇಶ ಕುರಿತು ಪ್ರತಿಕ್ರಿಯಿಸಿರುವ ದತ್ತಾ ಅವರ ಪುತ್ರಿ, ‘ನನ್ನ ತಂದೆಯನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬಯಸುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.