ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ | ಅಪಘಾತಕ್ಕೀಡಾದ ಸಿಎನ್‌ಜಿ ಆಟೊದಲ್ಲಿ ಬೆಂಕಿ: ಇಬ್ಬರು ಸಜೀವ ದಹನ

Published 14 ಅಕ್ಟೋಬರ್ 2023, 2:38 IST
Last Updated 14 ಅಕ್ಟೋಬರ್ 2023, 2:38 IST
ಅಕ್ಷರ ಗಾತ್ರ

ಕಣ್ಣೂರು: ಸಿಎನ್‌ಜಿ ಆಟೊ ರಿಕ್ಷಾ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನವಾದ ಘಟನೆ ಕೇರಳದ ಕಣ್ಣೂರಿನ ಕದಿರೂರಿನಲ್ಲಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಸುಮಾರು 8.30ಕ್ಕೆ ಘಟನೆ ನಡೆದಿದ್ದು, ಆಟೊ ಚಾಲಕ ಅಭಿಲಾಷ್ (37) ಹಾಗೂ ಆತನ ಸ್ನೇಹಿತ ಸೈಜೇಶ್‌ (36) ಮೃತಪಟ್ಟವರು.

ಆಟೊ ರಿಕ್ಷಾ ಹಾಗೂ ಖಾಸಗಿ ಬಸ್‌ ನಡುವೆ ಅಪಘಾತ ನಡೆದಿದ್ದು, ಬೆಂಕಿ ಹೊತ್ತಿಕೊಳ್ಳುವುದಕ್ಕೂ ಮುನ್ನ ರಿಕ್ಷಾ ಪಲ್ಟಿಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಲಿಂಡರ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ಇಡೀ ಆಟೊಗೆ ಹಬ್ಬಿತು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಬೆಂಕಿಯಿಂದಾಗಿ ಸ್ಥಳೀಯರು ಆಟೊದ ಬಳಿ ಹೋಗಲು ಆಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಬೆಂಕಿ ನಂದಿಸಿದೆ. ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT