ಬರೇಲಿ: ಇತ್ತೇಹಾದ್ -ಎ-ಮಿಲ್ಲತ್ ಕೌನ್ಸಿಲ್ ಮುಖ್ಯಸ್ಥ ಮೌಲ್ವಿ ತೌಕೀರ್ ರಜಾ ಖಾನ್ಗೆ ಸೇರಿದ 8 ಕಟ್ಟಡಗಳನ್ನು ನೆಲಸಮಗೊಳಿಸಲು ಬರೇಲಿ ಆಡಳಿತಾಧಿಕಾರಿಗಳು ಗುರುತು ಮಾಡಿದ್ದಾರೆ. ಈ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಿರುವ ಆರೋಪವಿದೆ.

ಬರೇಲಿ ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಜಂಟಿಯಾಗಿ ಜಗತ್ಪುರದ ಫೈಕ್ ಎನ್ಕ್ಲೇವ್ ಹಾಗೂ ಓಲ್ಡ್ ಸಿಟಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ, ತೌಕೀರ್ಗೆ ಸೇರಿದ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳನ್ನು ಗುರುತಿಸಿರುವುದಾಗಿ ಹೇಳಿದ್ದಾರೆ.

ಈ ಕಟ್ಟಡಗಳನ್ನು ಆಡಳಿತದ ಅನುಮೋದಿತ ನಕ್ಷೆ ಇಲ್ಲದೇ, ಸರ್ಕಾರಿ ಜಾಗವನ್ನೂ ಅತಿಕ್ರಮಿಸಿಕೊಂಡು ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಪೊಲೀಸರು ಕೂಡ ಈ ಬಗ್ಗೆ ಮಾತನಾಡಿ, ‘ಕಳೆದ ಹಲವು ವರ್ಷಗಳಿಂದ ಫಾಯಿಕ್ ಎನ್ಕ್ಲೇವ್ ಕ್ರಿಮಿನಲ್ಗಳ ಆಶ್ರಯತಾಣವಾಗಿ ಮಾರ್ಪಟ್ಟಿದೆ ಎಂದಿದ್ದಾರೆ. ಜತೆಗೆ ತೌಕೀರ್ ಸಹಚರರಾದ ಫರ್ಹಾತ್ ಹಾಗೂ ಮೊಹಮ್ಮದ್ ಆರೀಫ್ ಕೂಡ ಈ ಪ್ರದೇಶದಲ್ಲಿ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದರು ಎಂಬುದು ಕಂಡುಬಂದಿದೆ ಎಂದಿದ್ದಾರೆ.

ಬರೇಲಿಯಲ್ಲಿ ಇತ್ತೀಚೆಗಿನ ಹಿಂಸಾಚಾರಕ್ಕೆ ಕಾರಣವಾದ ‘ಐ ಲವ್ ಮುಹಮ್ಮದ್’ ಪ್ರತಿಭಟನೆಗೆ ಮೌಲ್ವಿ ತೌಕೀರ್ ರಜಾ ಖಾನ್ ಅವರೇ ಕರೆ ನೀಡಿದ್ದರು ಎಂಬ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹವರ್ತಿಗಳನ್ನೂ ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.