ಚಂಡೀಗಡ: 18 ವರ್ಷದ ಬಾಸ್ಕೆಟ್‌ಬಾಲ್ ಆಟಗಾರ್ತಿ ಮೇಲೆ ಮೂವರು ಯುವಕರು ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕೆ ಪ್ರತಿರೋಧ ಒಡ್ಡಿದಾಗ ಕ್ರೀಡಾಂಗಣದ ಛಾವಣಿಯಿಂದ ಕೆಳಗೆ ತಳ್ಳಿರುವ ಘಟನೆ ಪಂಜಾಬ್‌ನ ಮೊಗಾ ಜಿಲ್ಲೆಯಲ್ಲಿ ನಡೆದಿದೆ.

ಕೆಳಗೆ ಬಿದ್ದ ಆಟಗಾರ್ತಿಗೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಟಗಾರ್ತಿಯನ್ನು ಲುಧಿಯಾನಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗೊಂಡಿರುವ ಕಾಲು ಮತ್ತು ದವಡೆಗೆ ಚಿಕಿತ್ಸೆಗೆ ಪಡೆಯುತ್ತಿದ್ದಾರೆ.

ಆಗಸ್ಟ್ 12ರಂದೇ ಘಟನೆ ನಡೆದಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳು ಅಭ್ಯಾಸ ನಡೆಸಲೆಂದು ಕ್ರೀಡಾಂಗಣಕ್ಕೆ ತೆರಳಿದ್ದಳು ಎಂದು ಕ್ರೀಡಾಳುವಿನ ತಂದೆ ದಾಖಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಒಬ್ಬ ಆರೋಪಿಯನ್ನು ಜತಿನ್ ಕಂಡ ಎಂದು ಗುರುತಿಸಲಾಗಿದ್ದು, ಆತ ಬಾಸ್ಕೆಟ್‌ಬಾಲ್ ಆಟಗಾರ್ತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಆಕೆ ಪ್ರತಿರೋಧ ಒಡ್ಡಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಂಗಡಿಗರ ಜೊತೆ ಸೇರಿ 25 ಅಡಿ ಎತ್ತರದ ಛಾವಣಿಯಿಂದ ಕೆಳಗೆ ತಳ್ಳಿದ್ದಾನೆ. ಹೀಗಾಗಿ, ಆಕೆಗೆ ತೀವ್ರ ಗಾಯಗಳಾಗಿವೆ.

ಐಪಿಸಿ ಕಾಯ್ದೆಯ ವಿಧಿ 307 (ಹತ್ಯೆ ಯತ್ನ) ಮತ್ತು 376 (ಅತ್ಯಾಚಾರ) ಸೇರಿದಂತೆ ವಿವಿಧ ಕಾಯ್ದೆಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿರುವುದಾಗಿ ಎಸ್‌ಪಿ ಗುಲ್ನೀತ್ ಖುರಾನಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.