ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೇಶ್‌ ರಾವುತ್‌ ಜಾಮೀನಿಗೆ ತಡೆ ವಿಸ್ತರಣೆ

Published 27 ಸೆಪ್ಟೆಂಬರ್ 2023, 16:33 IST
Last Updated 27 ಸೆಪ್ಟೆಂಬರ್ 2023, 16:33 IST
ಅಕ್ಷರ ಗಾತ್ರ

ನವದೆಹಲಿ: ಭೀಮಾ ಕೊರೆಗಾಂವ್‌ ಪ್ರಕರಣದ ಆರೋಪಿ ಮಹೇಶ್‌ ರಾವುತ್‌ ಅವರಿಗೆ ಬಾಂಬೆ ಹೈಕೋರ್ಟ್‌ ನೀಡಿದ್ದ ಜಾಮೀನನ್ನು ವಿರೋಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಐಎನ್‌ಎ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ಪುರಸ್ಕರಿಸಿದೆ ಮತ್ತು ಜಾಮೀನಿಗೆ ನೀಡಿದ್ದ ತಡೆಯನ್ನು ವಿಸ್ತರಿಸಿ ಆದೇಶ ನೀಡಿದೆ.  

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಬೇಲಾ ಎಂ. ತ್ರಿವೇದಿ ಅವರಿದ್ದ ನ್ಯಾಯಪೀಠವು, ಮುಂದಿನ ವಿಚಾರಣೆಯನ್ನು ಅಕ್ಟೋಬರ್‌ 5ಕ್ಕೆ ನಿಗದಿಪಡಿಸಿತು ಮತ್ತು ಅಲ್ಲಿಯವರೆಗೆ ಜಾಮೀನಿಗೆ ತಡೆ ನೀಡಿರುವುದಾಗಿ ಹೇಳಿತು. 

ರಾವುತ್‌ ಅವರನ್ನು 2018ರ ಜೂನ್ 6ರಂದು ಬಂಧಿಸಲಾಗಿತ್ತು. ಸದ್ಯ ಅವರನ್ನು ನವಿ ಮುಂಬೈನ ತಾಲೋಜ ಜೈಲಿನಲ್ಲಿ ಇರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT