ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಬುಧವಾರ) ಪ್ರಕಟಿಸಿದೆ.

ಗಾಯಕಿ ಮೈಥಿಲಿ ಠಾಕೂರ್ ಅವರನ್ನು ಅಲಿನಗರ ಕ್ಷೇತ್ರದಿಂದ ಮತ್ತು ಮಾಜಿ ಐಪಿಎಸ್ ಅಧಿಕಾರಿ ಆನಂದ್ ಮಿಶ್ರಾ ಅವರನ್ನು ಬಕ್ಸಾರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ರಾಮಚಂದ್ರ ಪ್ರಸಾದ್ ಅವರು ಹಯಾಘಾಟ್ ಕ್ಷೇತ್ರದಿಂದ ಸ್ಪರ್ಧಿಸಿದರೆ, ಛೋಟಿ ಕುಮಾರಿ ಮತ್ತು ರಾಕೇಶ್ ಓಜಾ ಕ್ರಮವಾಗಿ ಛಾಪ್ರಾ ಮತ್ತು ಶಾಹಪುರದಿಂದ ಸ್ಪರ್ಧಿಸಲಿದ್ದಾರೆ.
.ಬಿಗ್ಬಾಸ್ ಮೊದಲ ಫಿನಾಲೆಗೆ ಅಖಾಡ ಸಿದ್ಧ: ಅಳಿವು-ಉಳಿವಿನ ಹೋರಾಟದಲ್ಲಿ ಸ್ಪರ್ಧಿಗಳು.ಆನೆಗಳಿಗೆ ನೆಲೆಯಾದ ದಕ್ಷಿಣ ಭಾರತ: ಅಗ್ರಸ್ಥಾನದಲ್ಲಿ ಕರ್ನಾಟಕ.
ಬೀರೇಂದ್ರ ಕುಮಾರ್ ಮತ್ತು ಮಹೇಶ್ ಪಾಸ್ವಾನ್ ಅವರು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ರೋಸೆರಾ ಮತ್ತು ಅಗಿಯಾನ್ನಿಂದ ಸ್ಪರ್ಧಿಸಿದರೆ, ರಂಜನ್ ಕುಮಾರ್ ಮುಜಫರ್ಪುರದಿಂದ ಮತ್ತು ಸುಭಾಷ್ ಸಿಂಗ್ ಗೋಪಾಲ್ಗಂಜ್ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

25 ವರ್ಷದ ಮೈಥಿಲಿ ಠಾಕೂರ್ ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಮಧುರ ಕಂಠದಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದು, 2024ರಲ್ಲಿ ಪ್ರಧಾನಿಯವರಿಂದ ‘ನ್ಯಾಷನಲ್ ಕ್ರಿಯೆಟರ್ ಪ್ರಶಸ್ತಿ’ಯನ್ನೂ ಪಡೆದಿದ್ದಾರೆ.

243 ಸ್ಥಾನಗಳ ಪೈಕಿ ತಲಾ 101 ಸ್ಥಾನಗಳಲ್ಲಿ ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸ್ಪರ್ಧಿಸಲಿವೆ. ಇನ್ನುಳಿದ ಸ್ಥಾನಗಳನ್ನು ಇತರೆ ಸಣ್ಣ ಮೈತ್ರಿ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.

ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ.
.MVAಗೆ ರಾಜ್ ಠಾಕ್ರೆ ಸೇರ್ಪಡೆ | ದೇಶದ ಹಿತಕ್ಕಾಗಿ ಕೈಜೋಡಿಸುವುದು ತಪ್ಪಲ್ಲ: ಸುಳೆ.ಬೆಂಗಳೂರಿನಲ್ಲಿ ಮೊದಲ ಬಾರಿಗೆ ಏಕರೂಪ ಖಾತಾ ವ್ಯವಸ್ಥೆ ಜಾರಿ: ಡಿ.ಕೆ. ಶಿವಕುಮಾರ್.ಯುದ್ಧಭೂಮಿಗೆ ಹೋಗುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ:ಕಿಶೋರ್ಗೆ RJD ವ್ಯಂಗ್ಯ.ದುರ್ಗಾಪುರ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಸ್ನೇಹಿತನಿಗೆ 7 ದಿನ ಪೊಲೀಸ್ ಕಸ್ಟಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.