ಭಾರತದ ದಕ್ಷಿಣ ರಾಜ್ಯಗಳು ಅತಿ ಹೆಚ್ಚು ಆನೆಗಳಿಗೆ ನೆಲೆಯಾಗಿವೆ ಎಂದು ಅಧ್ಯಯನವೊಂದು ಹೇಳಿದೆ. ಆ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು ಮತ್ತು ಕೇರಳ ರಾಜ್ಯಗಳು ಇವೆ.

ಇತ್ತೀಚೆಗೆ ಬಿಡುಗಡೆ ಮಾಡಿರುವ ಸಮೀಕ್ಷಾ ವರದಿ ಪ್ರಕಾರ, ಕರ್ನಾಟಕ ಭಾರತದಲ್ಲಿ ಅತಿ ಹೆಚ್ಚು ಕಾಡಾನೆಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಿಡುಗಡೆಯಾಗಿರುವ ವರದಿ ಪ್ರಕಾರ, ಭಾರತದಲ್ಲಿ 22,446 ಆನೆಗಳಿವೆ. ಇದು 2017ರಲ್ಲಿನ ಸಂಖ್ಯೆಗಳಿಗಿಂತ ಕಡಿಮೆಯಾಗಿದೆ. ಆಗ ಭಾರತದಲ್ಲಿ 27,312 ಆನೆಗಳಿದ್ದವು.

‘ಡಿಎನ್ಎ ಆಧಾರಿತ ಅಖಿಲ ಭಾರತ ಆನೆಗಳ ಸಂಖ್ಯೆಯ ಅಂದಾಜು' ಎಂಬ ಅಧ್ಯಯನವು ದೇಶದ ವಿವಿಧ ಭಾಗಗಳಲ್ಲಿನ ಕಾಡಾನೆಗಳ ಸಂಖ್ಯೆ ಎಷ್ಟಿದೆ ಎಂಬ ವರದಿಯನ್ನು ಬಿಡುಗಡೆಗೊಳಿಸಿದೆ. ಭಾರತವು ಏಷ್ಯಾದಲ್ಲೆ ಅತಿ ಹೆಚ್ಚು ಅನೆಗಳಿಗೆ ನೆಲೆಯಾಗಿರುವ ದೇಶವಾಗಿದೆ.

ಹರಪ್ಪಾ ನಾಗರಿಕತೆಯ ಕಾಲದಿಂದಲೂ ಮಾನವರೊಂದಿಗೆ ಈ ಕಾಡು ಜೀವಿಗೆ ಐತಿಹಾಸಿಕ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಅಧ್ಯಯನದ ಪ್ರಕಾರ ಆನೆಗಳು ಆರ್ಥಿಕತೆ ಮತ್ತು ಮಿಲಿಟರಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.

ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳು ಅತಿ ಹೆಚ್ಚು ಆನೆಗಳಿಗೆ ನೆಲೆಯಾಗಿವೆ ಎಂದು ಅಧ್ಯಯನ ಸ್ಪಷ್ಟಪಡಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದುಕೊಂಡರೆ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ನಂತರದ ಸ್ಥಾನಗಳಲ್ಲಿವೆ. ದಕ್ಷಿಣದ ಮೂರು ರಾಜ್ಯಗಳಿಂದ ಭಾರತದ ಶೇ 53.16 ರಷ್ಟು ಆನೆಗಳನ್ನು ಹೊಂದಿವೆ.

ಕರ್ನಾಟಕ –6,013 ಆನೆಗಳು

ತಮಿಳುನಾಡು–3,136

ಕೇರಳ–2,785 ಆನೆಗಳಿವೆ.

ಪಶ್ಚಿಮ ಘಟ್ಟಗಳಲ್ಲಿ ಒಟ್ಟು ಆನೆಗಳ ಸಂಖ್ಯೆ 11,934 ಕ್ಕೆ ತಲುಪಿದೆ.

ಇನ್ನೂ ಅಸ್ಸಾಂ–4,159 ಆನೆಗಳಿವೆ

ಈ ಅಧ್ಯಯನವು ದೇಶದ ಇತರ ಭಾಗಗಳಲ್ಲಿನ ಆನೆಗಳ ಸಂಖ್ಯೆಯನ್ನು ಸಹ ಪರಿಶೀಲಿಸಿದೆ. ಮಧ್ಯ ಭಾರತ ಮತ್ತು ಪೂರ್ವ ಘಟ್ಟಗಳಲ್ಲಿ 1,891 ಆನೆಗಳಿವೆ. ಶಿವಾಲಿಕ್ ಬೆಟ್ಟಗಳು ಮತ್ತು ಗಂಗಾ ಬಯಲು ಪ್ರದೇಶಗಳಲ್ಲಿ 2,062 ಆನೆಗಳು, ಈಶಾನ್ಯ ಬೆಟ್ಟಗಳು ಮತ್ತು ಬ್ರಹ್ಮಪುತ್ರ ಬಯಲು ಪ್ರದೇಶಗಳಲ್ಲಿ 6,559 ಆನೆಗಳಿರುವುದು ದಾಖಲಾಗಿದೆ.

ಉತ್ತರ ಭಾರತದ ಅಸ್ಸಾಂ, ಕರ್ನಾಟಕದ ಬಳಿಕ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಭಾರತದ ಎರಡನೇ ರಾಜ್ಯವಾಗಿದೆ. ಇಲ್ಲಿ 4,159 ಆನೆಗಳಿವೆ. ಇದು ತಮಿಳುನಾಡು ಮತ್ತು ಕೇರಳದ ಸಂಖ್ಯೆಗಳಿಗಿಂತ ಹೆಚ್ಚು.

2021 ರಲ್ಲಿ ಈ ಆನೆಗಳ ಸಮೀಕ್ಷೆ ಪ್ರಾರಂಭವಾಗಿದ್ದು, ಸರ್ಕಾರ ಸುಮಾರು 4 ವರ್ಷಗಳ ನಂತರ ಮಂಗಳವಾರ ಬಿಡುಗಡೆ ಮಾಡಿದೆ. ಇದು ಕಳೆದ 2017ರಲ್ಲಿ ದಾಖಲಾಗಿದ್ದ ಸಂಖ್ಯೆಗಿಂತ ಕಡಿಮೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಆನೆಗಳ ಸಗಣಿಯ ಮಾದರಿ ಪಡೆದು ಡಿಎನ್ಎ ವಿಶ್ಲೇಷಣೆ ನಡೆಸಿರುವುದು ಇದೇ ಮೊದಲು. ಈ ವರದಿ ಭವಿಷ್ಯದಲ್ಲಿ ಆನೆಗಳ ಮೇಲ್ವಿಚಾರಣೆ ಮತ್ತು ಅಂದಾಜಿಗೆ ಹೊಸ ಆಧಾರಸ್ತಂಭವಾಗಲಿದೆ. ಈ ವಿಧಾನವನ್ನು ಮತ್ತಷ್ಟು ಪರಿಷ್ಕರಿಸಲಾಗುವುದು. ಈ ಉದ್ದೇಶಕ್ಕಾಗಿಯೇ ಎಲ್ಲಾ ವನ್ಯಜೀವಿ ವಾರ್ಡನ್ಗಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದೆ‘ ಎಂದು ಅಧಿಕಾರಿ ಹೇಳಿದರು.

ವಿಜ್ಞಾನಿಗಳು 21,056 ಆನೆಗಳ ಸಗಣಿ ಮಾದರಿಯನ್ನು ಸಂಗ್ರಹಿಸಿ, ಪ್ರತ್ಯೇಕ ಪ್ರಾಣಿಗಳನ್ನು ಗುರುತಿಸಲು ಡಿಎನ್ಎ ಫಿಂಗರ್ಪ್ರಿಂಟಿಂಗ್ ಮಾಡಿದ್ದಾರೆ. ಇದು ಮಾನವರನ್ನು ಹೇಗೆ ಅವರ ಪೂರ್ವಿಕರ ಆಧಾರದಲ್ಲಿ ಗುರುತಿಸಲಾಗುತ್ತದೆಯೊ ಅದೇ ಕ್ರಮವಾಗಿದೆ. ಈ ಅಧ್ಯಯನವು ಸುಮಾರು 6.7 ಲಕ್ಷ ಕಿ.ಮೀ ಅರಣ್ಯದ ಹಾದಿಗಳನ್ನು ಒಳಗೊಂಡಿದೆ ಮತ್ತು 3.1 ಲಕ್ಷಕ್ಕೂ ಹೆಚ್ಚು ಸಗಣಿ ಪ್ಲಾಟ್ಗಳನ್ನು ಒಳಗೊಂಡಿದೆ.

ಪರಿಸರ ಸಚಿವಾಲಯ, ಪ್ರಾಜೆಕ್ಟ್ ಎಲಿಫೆಂಟ್ ಮತ್ತು ಭಾರತೀಯ ವನ್ಯಜೀವಿ ಸಂಸ್ಥೆ ಜಂಟಿಯಾಗಿ ನಡೆಸಿದ 2025ರ ಸರ್ವೆಯು ಭವಿಷ್ಯದಲ್ಲಿ ಆನೆಗಳ ಮೇಲ್ವಿಚಾರಣೆ ಮತ್ತು ಸಂರಕ್ಷಣಾ ಯೋಜನೆಗಳಿಗೆ ಹೊಸ ವೈಜ್ಞಾನಿಕ ಆಧಾರವನ್ನು ನೀಡಿದೆ. ಈ ವರದಿಗಾಗಿ ಭೂ ಸಮೀಕ್ಷೆ, ಉಪಗ್ರಹ ಆಧಾರಿತ ಮ್ಯಾಪಿಂಗ್ ಮತ್ತು ಆನುವಂಶಿಕ ವಿಶ್ಲೇಷಣೆಯನ್ನು ಜೋಡಿಸುವ ಮೂರು ಹಂತದ ಪ್ರಕ್ರಿಯೆಯನ್ನು ಬಳಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.