ಸಿವಾನ್(ಬಿಹಾರ): ವಿಧಾನಸಭಾ ಚುನಾವಣೆಯಲ್ಲಿ ಆರ್ಜೆಡಿ ಮತ್ತು ಅವರ ಮಿತ್ರ ಪಕ್ಷಗಳು ಅವಮಾನಕರ ಸೋಲು ಅನುಭವಿಸಿದ ನಂತರ ಬಿಹಾರದಲ್ಲಿ ನ.14ರಂದು ನಿಜವಾದ ದೀಪಾವಳಿ ಆಚರಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರದ ಸಿವಾನ್ನಲ್ಲಿ ಅಮಿತ್ ಶಾ ಅವರು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದಾರೆ.

ಲಾಲು ಪ್ರಸಾದ್ ಹಾಗೂ ರಾಬ್ರಿ ದೇಬಿ ಅವರು 20ಕ್ಕೂ ಅಧಿಕ ವರ್ಷಗಳ ಕಾಲ ಸಿವಾನ್ನ ಜನರ ಮೇಲೆ ‘ಜಂಗಲ್ ರಾಜ್’ ಹೇರಿಕೆ ಮಾಡಿದ್ದಾರೆ. ಇದೀಗ ಕ್ರಿಮಿನಲ್ ಹಿನ್ನಲೆಯಿರುವ ಮೊಹಮ್ಮದ್ ಶಹಾಬುದ್ದೀನ್ ಮಗ ಒಸಾಮಾ ಸಾಹಬ್ಗೆ ರಘುನಾಥಪುರ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಎಂದು ಜನರಿಗೆ ಕರೆ ನೀಡಿದ್ದಾರೆ.

ಬಿಹಾರದಲ್ಲಿ ‘ಇಂಡಿಯಾ’ ಮೈತ್ರಿಕೂಟವು ಸಂಪೂರ್ಣವಾಗಿ ಛಿದ್ರಗೊಂಡಿದೆ. ಕಾಂಗ್ರೆಸ್ ನೇತೃತ್ವದಲ್ಲಿ ‘ಮತ ಅಧಿಕಾರ ಯಾತ್ರೆ’ ಮಾಡುವ ಮೂಲಕ ಅವರ ನಾಯಕ ರಾಹುಲ್ ಗಾಂಧಿ ಅವರು ಒಳನುಸುಳುಕೋರರು ಇಲ್ಲಿರಬಹುದು ಎಂದು ಹೇಳಿದ್ದರು. ಆದರೆ, ಬಿಹಾರದಲ್ಲಿ ಒಬ್ಬನೇ ಒಬ್ಬ ಒಳನುಸುಳುಕೋರ ಇರುವುದಕ್ಕೆ ನಾವು ಅವಕಾಶ ನೀಡುವುದಿಲ್ಲ’ ಎಂದು ಅಮಿತ್ ಶಾ ಹೇಳಿದ್ದಾರೆ.

ನವೆಂಬರ್ 14ರಂದು ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.