ಪಟ್ನಾ: ವಿಧಾನಸಭೆ ಚುನಾವಣಾ ಹೊಸ್ತಿಲಲ್ಲಿರುವ ಬಿಹಾರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಹಾರದ ಮಾಜಿ ಮುಖ್ಯಮಂತ್ರಿ, ರಾಷ್ಟ್ರೀಯ ಜನತಾದಳ (ಆರ್ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೃತ್ಯ ಮಾಡುವ ಎಐ ವಿಡಿಯೊವನ್ನು ಹಂಚಿದ್ದಾರೆ.

'ಬಿಹಾರದ ಹಿತದೃಷ್ಟಿಯಿಂದ ಹವಾಮಾನ ಮುನ್ನಚ್ಚೆರಿಕೆ ಎಂದು ಹೇಳಿರುವ ಲಾಲು, ಇಂದು ಬಿಹಾರದಲ್ಲಿ ಸುಳ್ಳು ಭರವಸೆಗಳ ಮಳೆಯಾಗಲಿದೆ' ಎಂದು ವ್ಯಂಗ್ಯವಾಡಿದ್ದಾರೆ.

ಅಲ್ಲದೆ ಜನರು ಜಾಗರೂಕರಾಗಿರುವಂತೆ ಎಚ್ಚರಿಸಿದ್ದಾರೆ.

ವಿಡಿಯೊದ ಕೊನೆಯಲ್ಲಿ ಜನನಾಯಕನಾಗಿ ಪುತ್ರ ತೇಜಸ್ವಿ ಯಾದವ್ ಅವರನ್ನು ಬಿಂಬಿಸಲಾಗಿದೆ.

ಬಿಹಾರ ವಿಧಾನಸಭೆಗೆ ವರ್ಷಾಂತ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ.
.ಇಂಗ್ಲಿಷ್ ಸಬಲೀಕರಣದ ಭಾಷೆ; ಅವಮಾನದ ಭಾಷೆಯಲ್ಲ: ರಾಹುಲ್ ಗಾಂಧಿ.ಇನ್ನಾದರೂ ಭದ್ರತೆಗೆ ಸಂಬಂಧಿಸಿ ಮುಕ್ತ ಚರ್ಚೆಗೆ PM ಒಪ್ಪುತ್ತಾರೆಯೇ?: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.