ನವದೆಹಲಿ/ಗೋಪಾಲಗಂಜ್/ಸಿವಾನ್/ಬೇಗುಸರಾಯ್: ‘ಮುಖ್ಯಮಂತ್ರಿ ಮಹಿಳಾ ರೋಜ್ಗಾರ್ ಯೋಜನೆ’ ಅಡಿಯಲ್ಲಿ ಬಿಹಾರ ಸರ್ಕಾರವು ಅ.7, 24 ಮತ್ತು 31ರಂದು ಮಹಿಳೆಯರಿಗೆ ಹಣ ವರ್ಗಾವಣೆ ಮಾಡಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಆರ್ಜೆಡಿ ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಅ.6ರಿಂದ ಬಿಹಾರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಆರ್ಜೆಡಿ ಸಂಸದ ಮನೋಜ್ ಝಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ‘ಎರಡನೇ ಹಂತದ ಮತದಾನಕ್ಕೂ ನಾಲ್ಕು ದಿನ ಮುಂಚಿತವಾಗಿ ನ. 7ರಂದು ಮತ್ತೊಂದು ಕಂತಿನ ಹಣ ವರ್ಗಾವಣೆ ಆಗಲಿದೆ’ ಎಂದಿದ್ದಾರೆ.

‘ಒಂದೆಡೆ ನೀತಿ ಸಂಹಿತೆ ಜಾರಿಯಲ್ಲಿದೆ, ಇನ್ನೊಂದೆಡೆ ಮತದಾನದ ದಿನಾಂಕವು ಹತ್ತಿರದಲ್ಲಿದೆ. ಇಂಥ ಸಮಯದಲ್ಲಿ ಹಣ ವರ್ಗಾವಣೆ ಮಾಡಲಾಗಿದೆ. ಇದು ಮತದಾರರನ್ನು ಸೆಳೆಯಲು ಮಾಡಿದ ವ್ಯವಸ್ಥಿತ ಯತ್ನ. ನೀತಿ ಸಂಹಿತೆ ಇರುವುದು ಪಕ್ಷಗಳಿಗೆ ಸಮಾನ ಅವಕಾಶ ಸಿಗುವುದಕ್ಕಾಗಿ. ಆದರೆ, ಇಲ್ಲಿ ಸಮಾನ ಅವಕಾಶವೇ ಇಲ್ಲದಂತಾಗಿದೆ’ ಎಂದರು.

‘ಆಯೋಗವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ನೀತಿ ಸಂಹಿತೆ ಪಾಲಿಸುವುದು ಮತ್ತು ಯಾವುದೇ ಹಂತದಲ್ಲಿಯೂ ನ್ಯಾಯಸಮ್ಮತ ಚುನಾವಣೆ ನಡೆಯುವುದು ಸಾಂವಿಧಾನಿಕವಾದ ಕಡ್ಡಾಯ ಎಂಬುದನ್ನು ತೋರಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.

ಹೆಲಿಕಾಪ್ಟರ್ ಹಾರಾಟ ರದ್ದು: ಕಳೆದ ಮೂರು ದಿನಗಳಿಂದ ಬಿಹಾರದಲ್ಲಿ ಮಳೆ ಸುರಿಯುತ್ತಿರುವುದರಿಂದ ವಿವಿಧ ರಾಜಕೀಯ ಪಕ್ಷಗಳ ನಾಯಕರ ಸುಮಾರು 22 ಹೆಲಿಕಾಪ್ಟರ್ಗಳ ಹಾರಾಟಗಳನ್ನು ರದ್ದು ಮಾಡಲಾಗಿದೆ. ಮೊದಲ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರವು ನ.4ರಂದು ಅಂತ್ಯಗೊಳ್ಳಲಿದೆ.