ಔರಂಗಬಾದ್(ಬಿಹಾರ): ಬಿಹಾರ ಚುನಾವಣೆಯು ಎನ್ಡಿಎ ಮೈತ್ರಿಕೂಟದ ‘ವಿಕಾಸ’ ಮತ್ತು ಇಂಡಿಯಾ ಬಣದ ‘ವಿನಾಶ’ ನಡುವಿನ ಹೋರಾಟವಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಹೇಳಿದ್ದಾರೆ.

ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ನಡ್ಡಾ, ‘ಇಂಡಿಯಾ ಬಣದ ಸಣ್ಣ ಪಕ್ಷಗಳನ್ನು ಕಾಂಗ್ರೆಸ್ ತಿಂದು ಮುಗಿಸಿದೆ’ ಎಂದು ಆರೋಪಿಸಿದ್ದಾರೆ.

ಆರ್ಜೆಡಿ ವಿರುದ್ಧವೂ ವಾಗ್ದಾಳಿ ಮುಂದುವರಿಸಿರುವ ಅವರು, ‘ಸುಲಿಗೆ, ಅರಾಜಕತೆ, ಬೆದರಿಕೆಯನ್ನು ಲಾಲೂ ಪ್ರಸಾದ್ ನೇತೃತ್ವದ ಆರ್ಜೆಡಿ ಪಕ್ಷ ಪ್ರತಿನಿಧಿಸುತ್ತದೆ’ ಎಂದು ಕಿಡಿಕಾರಿದ್ದಾರೆ.

‘ಯುವಜನರಿಗೆ ಉದ್ಯೋಗ ನೀಡುವ ಮೂಲಕ ವಲಸೆ ಹೋಗದಂತೆ ತಡೆಯುವುದಾಗಿ ತೇಜಸ್ವಿ ಯಾದವ್ ಭರವಸೆ ನೀಡಿದ್ದಾರೆ. ಆರ್ಜೆಡಿಯ ಇಂತಹ ಭರವಸೆಗಳು ಉದ್ಯೋಗಕ್ಕಾಗಿ ಭೂಮಿ ಹಗರಣವನ್ನು ನೆನಪಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಗ್ಯಾಂಗಸ್ಟರ್ ಮುಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್ಗೆ ಆರ್ಜೆಡಿಯಿಂದ ಟಿಕೆಟ್ ನೀಡಿರುವದನ್ನು ಟೀಕಿಸಿರುವ ನಡ್ಡಾ, ಇದು ಆರ್ಜೆಡಿಯು ಬಿಹಾರದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ’ ಎಂದಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.