ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls Tamilnadu | BJP–PMK ಮೈತ್ರಿ: 10 ಕ್ಷೇತ್ರಗಳಲ್ಲಿ ಪಿಎಂಕೆ ಸ್ಪರ್ಧೆ

Published 19 ಮಾರ್ಚ್ 2024, 6:24 IST
Last Updated 19 ಮಾರ್ಚ್ 2024, 6:24 IST
ಅಕ್ಷರ ಗಾತ್ರ

ವಿಲ್ಲುಪುರಂ (ತಮಿಳುನಾಡು): ಸೋಮವಾರವಷ್ಟೇ ಬಿಜೆಪಿ ಜತೆ ಮೈತ್ರಿಮಾಡಿಕೊಂಡ ತಮಿಳುನಾಡಿನ ಉತ್ತರ ಭಾಗದ ಪ್ರಭಾವಿ ಪ್ರಾದೇಶಿಕ ಪಕ್ಷ ಪಟ್ಟಾಳಿ ಮಕ್ಕಳ್‌ ಕಚ್ಚಿ (ಪಿಎಂಕೆ) ಜತೆಗೆ ಬಿಜೆಪಿಯು ಲೋಕಸಭೆ ಚುನಾವಣೆಗೆ ಮಂಗಳವಾರ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದೆ. ಮಿತ್ರಪಕ್ಷ ಪಿಎಂಕೆಗೆ 10 ಸ್ಥಾನಗಳನ್ನು ಬಿಜೆಪಿ ಹಂಚಿಕೆ ಮಾಡಿದೆ. 

ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಅಣ್ಣಾಮಲೈ ಮತ್ತು ಪಿಎಂಕೆ ಸಂಸ್ಥಾಪಕ ಎಸ್‌.ರಾಮದಾಸ್ ಅವರು ಇಲ್ಲಿನ ತೈಲಾಪುರಂ ನಿವಾಸದಲ್ಲಿ ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಕೇಂದ್ರ ಸಚಿವ ಎಲ್.ಮುರುಗನ್ ಕೂಡ ಇದ್ದರು. 

ಎನ್‌ಡಿಎ ಮಿತ್ರ ಪಕ್ಷ ಪಿಎಂಕೆ ತಮಿಳುನಾಡಿನ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಮತ್ತು ಪಿಎಂಕೆ ಅಧ್ಯಕ್ಷರಾದ ರಾಜ್ಯಸಭಾ ಸದಸ್ಯ ಡಾ. ಅನ್ಬುಮಣಿ ರಾಮದಾಸ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಿಎಂಕೆ ಕಳೆದ 10 ವರ್ಷಗಳಿಂದ ಎನ್‌ಡಿಎಯಲ್ಲಿದೆ. 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಬಣದ ಒಂದು ಘಟಕವಾಗಿ ಹೋರಾಡಿತ್ತು’ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT