ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡಿಎಂಕೆ–ಬಿಜೆಪಿ ಆಂತರಿಕವಾಗಿ ಚೆನ್ನಾಗಿವೆ: ಪಳನಿಸ್ವಾಮಿ ಆರೋಪ

Published 25 ಆಗಸ್ಟ್ 2024, 12:53 IST
Last Updated 25 ಆಗಸ್ಟ್ 2024, 12:53 IST
ಅಕ್ಷರ ಗಾತ್ರ

ಸೇಲಂ: ಬಿಜೆಪಿ ಹಾಗೂ ಡಿಎಂಕೆ ಮೇಲುನೋಟಕ್ಕೆ ‘ವಿರೋಧಿ’ಗಳಂತೆ ನಾಟಕವಾಡುತ್ತಿದ್ದಾರೆ. ಎರಡೂ ಪಕ್ಷಗಳ ನಡುವೆ ಒಳಗೊಳಗೇ ‘ವಿವೇಚನಾ ಒಪ್ಪಂದ’ವೊಂದು ಏರ್ಪಟ್ಟಿದೆ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಆರೋಪಿಸಿದರು.

ಕರುಣಾನಿಧಿ ಜನ್ಮ ಶತಮಾನೋತ್ಸವದ ನೆನಪಿನಲ್ಲಿ ನಾಣ್ಯ ಬಿಡುಗಡೆ ಸಮಾರಂಭವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದರು. ಆದರೆ, ನಿಜಕ್ಕೂ ಕಾರ್ಯಕ್ರಮ ನಡೆಸಿದ್ದು ರಾಜ್ಯ ಸರ್ಕಾರ ಎಂದು ಅವರು ಭಾನುವಾರ ಪುನರುಚ್ಚರಿಸಿದರು. 

‘ನನಗೆ ಬಂದ ಆಹ್ವಾನ ಪತ್ರಿಕೆಯಲ್ಲಿ ರಾಜ್ಯ ಸರ್ಕಾರದ ಲಾಂಛನ ಇತ್ತು. ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದಲೇ ಆಹ್ವಾನ ಪತ್ರಿಕೆ ಬಂದಿತ್ತು. ರಾಜ್ಯ ಸರ್ಕಾರದ್ದೇ ಕಾರ್ಯಕ್ರಮ ಅದಾಗಿತ್ತೆನ್ನುವುದಕ್ಕೆ ಇದೇ ಸಾಕ್ಷಿ’ ಎಂದು ಹೇಳಿದರು. 

ಕಳೆದ ವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಎಲ್. ಮುರುಗನ್ ಹಾಗೂ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಹಾಜರಿದ್ದರು ಎಂದೂ ತಿಳಿಸಿದರು. 

ಡಿಎಂಕೆ ಪಕ್ಷವು ‘ಇಂಡಿಯಾ’ ಒಕ್ಕೂಟದ ಭಾಗವಾಗಿದ್ದರೂ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಅವರ ಪುತ್ರ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನ ಬೇರೆ ಯಾವುದೇ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರಲಿಲ್ಲ. ರಾಜ್ಯದಲ್ಲಿನ ‘ಭ್ರಷ್ಟ ಸರ್ಕಾರ’ವನ್ನು ಕೇಂದ್ರ ಸರ್ಕಾರದ ನೆರವಿನಿಂದ ರಕ್ಷಿಸಿಕೊಳ್ಳಲು ಡಿಎಂಕೆ ಪ್ರಯತ್ನಿಸುತ್ತಿದೆ ಎಂದು ಪಳನಿಸ್ವಾಮಿ ಆರೋಪಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT