ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರನ್ನು ಬೆದರಿಸಲು ಬಿಜೆಪಿ ಗೂಂಡಾಗಳನ್ನು ನೇಮಿಸಿದೆ: ಮಮತಾ ಬ್ಯಾನರ್ಜಿ

Last Updated 22 ಮಾರ್ಚ್ 2021, 15:02 IST
ಅಕ್ಷರ ಗಾತ್ರ

ಕೋಟುಲ್ಪುರ/ಇಂಡಸ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಜನರಿಗೆ 'ಉಚಿತ' ಅಕ್ಕಿ ಮತ್ತು ದ್ವಿದಳ ಧಾನ್ಯಗಳನ್ನು ನೀಡುವುದಾಗಿ ಬಿಜೆಪಿ ನೀಡಿರುವ ಭರವಸೆಯ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕಿಡಿಕಾರಿದ್ದು, ಕೇಸರಿ ಪಕ್ಷವು ಚುನಾವಣೆಗೆ ಮುಂಚಿತವಾಗಿ 'ಎತ್ತರದ ಭರವಸೆಗಳನ್ನು' ನೀಡುತ್ತದೆ ಮತ್ತು ಎಂದಿಗೂ ಅವುಗಳನ್ನು ಈಡೇರಿಸುವುದಿಲ್ಲ ಎಂದು ಹೇಳಿದ್ದಾರೆ.

ಬಂಕಾಪುರ ಜಿಲ್ಲೆಯಲ್ಲಿನ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ 'ಜನರನ್ನು ಬೆದರಿಸಲು ಗೂಂಡಾಗಳಿಂದ ಸುತ್ತುವರಿಸಿದೆ. ಈ ಗೂಂಡಾಗಳು ಮನೆಗಳಿಗೆ ಭೇಟಿ ನೀಡಬಹುದು ಮತ್ತು ಕೈಮುಗಿದು ಮಹಿಳೆಯರಿಗೆ ಮತ ಚಲಾಯಿಸುವಂತೆ ಕೇಳಿಕೊಳ್ಳಬಹುದು ಅಥವಾ ಅವರನ್ನು ಹೊರಹಾಕುವ ಬೆದರಿಕೆಯನ್ನು ಹಾಕಬಹುದು' ಎಂದು ಹೇಳಿದ್ದಾರೆ.

'ಬಿಜೆಪಿ ಚುನಾವಣೆಗೂ ಮುನ್ನ ಸುಳ್ಳುಗಳನ್ನು ಮಾರಾಟ ಮಾಡುತ್ತದೆ. ಅವರು ಅಕ್ಕಿ, ಬೇಳೆ ಕಾಳುಗಳು, ಚಕ್ರಿ (ಕೆಲಸ) ಸೇರಿ ಎಲ್ಲವನ್ನೂ ನೀಡುವುದಾಗಿ ಭರವಸೆ ನೀಡುತ್ತಾರೆ. ಮತದಾನದ ನಂತರ, ಅವರು ಎಲ್ಲಿಯೂ ಕಾಣಿಸುವುದಿಲ್ಲ. ಪ್ರತಿ ನಾಗರಿಕರ ಬ್ಯಾಂಕ್ ಖಾತೆಗಳಲ್ಲಿ (2014ರ ಲೋಕಸಭಾ ಚುನಾವಣೆಗೆ ಮೊದಲು) 15 ಲಕ್ಷ ರೂ. ಠೇವಣಿ ಇಡುವುದಾಗಿ ಹೇಳಿದ್ದ ಪಕ್ಷದ ಭರವಸೆ ಏನಾಯಿತು ಎಂದು ತಿಳಿಯಲು ನಾನು ಬಯಸುತ್ತೇನೆ' ಎಂದು ದೂರಿದ್ದಾರೆ.

ಬೆದರಿಕೆಯನ್ನು ಹಾಕಿದರೆ ಅಂತಹ ಅಂಶಗಳನ್ನು ಓಡಿಸಲು ಅಡುಗೆ ಪಾತ್ರೆಗಳೊಂದಿಗೆ ಸಿದ್ಧರಾಗಿರಿ' ಎಂದು ಮಹಿಳೆಯರನ್ನು ಉದ್ದೇಶಿಸಿ ಹೇಳಿದ ಅವರು, ಕೇಸರಿ ಪಕ್ಷವು 'ಮತಗಳನ್ನು ಲೂಟಿ' ಮಾಡಲು 'ಬೋರ್ಗಿಸ್' (ಲೂಟಿ ಮಾಡುವವರನ್ನು) ಹೊರಗಿನಿಂದ ನೇಮಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಲಾಗುವುದು ಎಂಬ ಬಿಜೆಪಿಯ ಭರವಸೆಯನ್ನು ಅಪಹಾಸ್ಯ ಮಾಡಿದ ಸಿಎಂ, 'ಚುನಾಯಿತ ಪ್ರತಿನಿಧಿಗಳು ಸೇರಿ ವಿವಿಧ ಕ್ಷೇತ್ರಗಳಲ್ಲಿ ಶೇ 33 ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಅವರಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ದೂರಿದರು.

'ಇದಕ್ಕೆ ತದ್ವಿರುದ್ಧವಾಗಿ, ಪಂಚಾಯತ್ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 50 ರಷ್ಟು ಪ್ರಾತಿನಿಧ್ಯ ದೊರೆಯುವಂತೆ ಟಿಎಂಸಿ ಈಗಾಗಲೇ ಖಚಿತಪಡಿಸಿದೆ. ಸಂಸತ್ತಿನಲ್ಲಿ ಟಿಎಂಸಿ ಪ್ರತಿನಿಧಿಗಳಲ್ಲಿ 40 ಪ್ರತಿಶತ ಮಹಿಳೆಯರು ಇದ್ದಾರೆ' ಎಂದರು.

ಭಾನುವಾರ ಬಿಡುಗಡೆಯಾದ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿಯು 'ಕೆಜಿ ಟು ಪಿಜಿ' ಉಚಿತ ಶಿಕ್ಷಣ, ಸರ್ಕಾರಿ ಉದ್ಯೋಗಗಳಲ್ಲಿ ಶೇ.33ರಷ್ಟು ಮೀಸಲಾತಿ, ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣ, ಹೊಸ ಪೌರತ್ವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಮತ್ತು ರೈತರಿಗೆ ಮೂರು ಲಕ್ಷ ರೂ. ಅಪಘಾತ ವಿಮೆ ಒದಗಿಸುವುದಾಗಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT