ಲಖನೌ: ಬಿಜೆಪಿಯ ಸಂಸದ ಶರದ್ ತ್ರಿಪಾಠಿ ಮತ್ತು ಶಾಸಕ ರಾಕೇಶ್ ಸಿಂಗ್ ಭಗೇಲ್ ಪರಸ್ಪರ ಚಪ್ಪಲಿಯಲ್ಲಿ ಹೊಡೆದುಕೊಂಡು ಜಗಳವಾಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಉತ್ತರಪ್ರದೇಶದ ಸಂತ ಕಬೀರ್ ನಗರ ಜಿಲ್ಲೆಯಲ್ಲಿ ಬುಧವಾರಮೇಲ್ವಿಚಾರಣೆ ಮತ್ತು ನಿಗಾ ಸಮಿತಿ ಸಭೆಯಲ್ಲಿ ಈ ಘಟನೆ ನಡೆದಿದೆ.

ಸ್ಥಳೀಯ ರಸ್ತೆಯೊಂದರ ಶಂಕು ಸ್ಥಾಪನೆ ಮಾಡುವಾಗ ಅದರಲ್ಲಿ ತಮ್ಮ ಹೆಸರು ಯಾಕೆ ಬರೆದಿಲ್ಲ ಎಂದು ಸಂಸದ ಶರದ್ ತ್ರಿಪಾಠಿ ಕೇಳಿದ್ದರು.ಇದಕ್ಕೆ ಶಾಸಕ ರಾಕೇಶ್ ಭಗೇಲ್, ಇದು ನನ್ನ ನಿರ್ಧಾರ ಅಂದಿದ್ದರು. ಆ ಹೊತ್ತಲ್ಲಿ ಮಾತಿಗೆ ಮಾತು ಬೆಳೆದು ತ್ರಿಪಾಠಿ, ರಾಕೇಶ್ಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಕೇಶ್ ಕೂಡಾ ಚಪ್ಪಲಿಯಲ್ಲಿ ಹೊಡೆದಿದ್ದಾರೆ.

ಇಬ್ಬರು ಜನ ನಾಯಕರು ಕೆಟ್ಟ ಪದಗಳನ್ನು ಬಳಸಿ ಬೈಯುತ್ತಿರುವುದು ವಿಡಿಯೊ ದೃಶ್ಯದಲ್ಲಿದೆ.ಪೊಲೀಸರು ಮಧ್ಯಪ್ರವೇಶಿಸಿ ಈ ಜಗಳ ಬಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.