ನವದೆಹಲಿ: ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲಿಸಾ ಮಂತ್ರವನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲಿ, ಕೇಜ್ರಿವಾಲ್ ಹನುಮಾನ್ ಭಕ್ತರಾದ್ದರಿಂದ ದೆಹಲಿಯ ಎಲ್ಲಾ ಶಾಲಾ ಮಕ್ಕಳೇಕೆ ಈ ಮಂತ್ರದಿಂದ ವಂಚಿತರಾಗಬೇಕು ಎಂದು ದೆಹಲಿಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿಯಾ ವ್ಯಂಗ್ಯವಾಡಿದ್ದಾರೆ.

ಈ ಸಂಬಂಧ ಟ್ವಿಟರ್‌ನಲ್ಲಿ ಶುಭಾಶಯ ತಿಳಿಸಿರುವ ವಿಜಯ್ ವರ್ಗಿಯಾ ಅವರು, ಯಾರೆ ಬರಲಿ ಹನುಮಾನ್ ಆಶೀರ್ವಾದ ನೀಡುತ್ತಾರೆ. ಈಗ ಕಾಲ ಕೂಡಿ ಬಂದಿದೆ. ಹನುಮಾನ್ ಚಾಲೀಸಾ ಮಂತ್ರವನ್ನು ದೆಹಲಿಯ ಎಲ್ಲಾ ಶಾಲೆ, ಮದರಸಾ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಿ, ದೆಹಲಿ ವಿದ್ಯಾರ್ಥಿಗಳೇಕೆ ಭಜರಂಗಬಲಿಯ ಈ ಆಶೀರ್ವಾದದಿಂದವಂಚಿತರಾಗಬೇಕು ಎಂದು ಕಾಲೆಳೆದಿದ್ದಾರೆ.

ಮಂಗಳವಾರ ದೆಹಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶ ಹೊರಬಿದ್ದ ಸಮಯದಲ್ಲಿ ಕೇಜ್ರಿವಾಲ್, ಈ ದಿನ ಹನುಮಾನ್ ದೇವರ ದಿನ, ದೇವರು ದೆಹಲಿಯ ಜನರನ್ನು ಆಶೀರ್ವದಿಸಿದ್ದಾರೆ ಎಂದಿದ್ದರು.

ಈ ಪ್ರತಿಕ್ರಿಯೆ ಹೊರಬಿದ್ದ ನಂತರ ಬಿಜೆಪಿಯ ವಿಜಯ್ ಈ ರೀತಿ ವ್ಯಂಗ್ಯವಾಡಿದ್ದಾರೆ. 62 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಇದೇ 16ರಂದು ಭಾನುವಾರಅಧಿಕಾರವಹಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.