ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ‘ಬಿಹಾರದ ಡಿಎನ್‌ಎ’ ಹೇಳಿಕೆ: ಬಿಜೆಪಿ ಖಂಡನೆ

Published 7 ಡಿಸೆಂಬರ್ 2023, 15:52 IST
Last Updated 7 ಡಿಸೆಂಬರ್ 2023, 15:52 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರು, ಬಿಆರ್‌ಎಸ್‌ ಮುಖಂಡ ಕೆ. ಚಂದ್ರಶೇಖರ ರಾವ್‌ ಕುರಿತು ಈ ಹಿಂದೆ ನೀಡಿದ್ದ ‘ಬಿಹಾರಿ ವಂಶವಾಹಿ’ ಹೇಳಿಕೆಯನ್ನು ಬಿಜೆಪಿ ಗುರುವಾರ ವಿರೋಧಿಸಿದೆ. ಕಾಂಗ್ರೆಸ್‌ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸದಸ್ಯಪಕ್ಷಗಳು ಈ ಹೇಳಿಕೆಯನ್ನು ಖಂಡಿಸಬೇಕು ಮತ್ತು ಕ್ಷಮೆ ಕೇಳಲು ರೇವಂತ್‌ ಅವರಿಗೆ ಸೂಚಿಸಬೇಕು ಎಂದು ಆಗ್ರಹಿಸಿದೆ. 

ಪತ್ರಕರ್ತರ ಜೊತೆ ಈಚೆಗೆ ಮಾತನಾಡುತ್ತಿದ್ದ ವೇಳೆ ರೇವಂತ್‌ ಅವರು, ‘ಚಂದ್ರಶೇಖರ ರಾವ್‌ ಅವರದ್ದು ಬಿಹಾರಿ ವಂಶವಾಹಿ. ನನ್ನದು ತೆಲಂಗಾಣದ ಡಿಎನ್‌ಎ. ಕೆಸಿಆರ್‌ ಅವರು ಕುರ್ಮಿ ಸಮುದಾಯಕ್ಕೆ ಸೇರಿದವರು. ಅವರು ಬಿಹಾರ ಮೂಲದವರು. ಅಲ್ಲಿಂದ ತೆಲಂಗಾಣಕ್ಕೆ ವಲಸೆ ಬಂದವರು. ತೆಲಂಗಾಣ ಡಿಎನ್‌ಎಯು ಬಿಹಾರ ಡಿಎನ್‌ಎಗಿಂತ ಉತ್ತಮ’ ಎಂದು ಹೇಳಿದ್ದರು ಎನ್ನಲಾಗಿದೆ. 

‘ರೇವಂತ್‌ ಅವರ ಹೇಳಿಕೆಯು ಅವಮಾನಕಾರಿ ಮತ್ತು ಅಹಂಕಾರದಿಂದ ಕೂಡಿದೆ. ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ’ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್‌ ಪ್ರಸಾದ್‌ ಅವರು ಹೇಳಿದ್ದಾರೆ. ‘ಅವರು ದೇಶವನ್ನು ವಿಭಜಿಸಲು ಬಯಸಿದ್ದಾರಾ? ಇಂಡಿಯಾ ಮೈತ್ರಿಕೂಟದ ಸದಸ್ಯಪಕ್ಷಗಳು ಈ ಕುರಿತು ಏಕೆ ಮೌನದಿಂದಿವೆ? ಬಿಹಾರ ಮುಖ್ಯಮಂತ್ರಿ ನಿತೀಶ್‌ ಈ ಕುರಿತು ಏಕೆ ಏನನ್ನೂ ಹೇಳಿಲ್ಲ’ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT