ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಸೈಟ್‌ಗೆ ಟೆಂಪ್ಲೆಟ್ ಕದ್ದ ಬಿಜೆಪಿ: ಆಂಧ್ರದ ಸ್ಟಾರ್ಟಪ್ ಆರೋಪ

Last Updated 25 ಮಾರ್ಚ್ 2019, 10:19 IST
ಅಕ್ಷರ ಗಾತ್ರ

ನವದೆಹಲಿ:ಬಿಜೆಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಾವು ಅಭಿವೃದ್ಧಿಪಡಿಸಿದ ಟೆಂಪ್ಲೆಟ್‌ ಕೋಡ್‌ ಬಳಸಲಾಗಿದೆ ಎಂದು ಆಂಧ್ರಪ್ರದೇಶದ ನವೋದ್ಯಮ (ಸ್ಟಾರ್ಟಪ್) ಕಂಪನಿ ‘ವಿ3ಲೇಔಟ್‌’ ಆರೋಪಿಸಿದೆ.

‘ಎರಡು ವಾರಗಳಿಂದ ಬಿಜೆಪಿ ವೆಬ್‌ಸೈಟ್‌ನಲ್ಲಿ ನಮ್ಮ ಟೆಂಪ್ಲೆಟ್ ಬಳಸಲಾಗಿದೆ. ಆದರೆಕಂಪನಿಯ ಹೆಸರು ಉಲ್ಲೇಖಿಸಿರುವ ಬ್ಯಾಕ್‌ಲಿಂಕ್ ಅನ್ನು ನಮೂದಿಸುವ ಸೌಜನ್ಯ ತೋರಿಲ್ಲ’ ಎಂದು‘ವಿ3ಲೇಔಟ್‌’ ದೂರಿದೆ.

ಇದರ ಬೆನ್ನಲ್ಲೇ, ಆ ಕೋಡ್ ಅನ್ನು ವೆಬ್‌ಸೈಟ್‌ನಿಂದ ತೆರವು ಮಾಡಲಾಗಿದೆ ಎಂದುಬಿಜೆಪಿ ಸ್ಪಷ್ಟನೆ ನೀಡಿದೆ. ‘ಅದು ಉಚಿತ ಬಳಕೆಯ ಅಪ್ಲಿಕೇಷನ್ ಆಗಿದ್ದರಿಂದ ಬಳಸಿದ್ದೆವು. ಬ್ಯಾಕ್‌ಲಿಂಕ್ ತೆರವುಗೊಳಿಸಬೇಕು ಎಂದು ಸೂಚನೆ ದೊರೆತ ಬಳಿಕ ಅವರ ಕೋಡ್‌ ಅನ್ನು ತೆರವುಗೊಳಿಸಿದ್ದೇವೆ.ಬ್ಯಾಕ್‌ಲಿಂಕ್ ಬದಲಿಗೆ ಹೆಸರು ಉಲ್ಲೇಖಿಸುವುದಾಗಿ ಹೇಳಿದ್ದರೂ ಅದಕ್ಕೆ ಸಮ್ಮತಿಸದಿರುವುದರಿಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಿದ್ದೇವೆ’ ಎಂದು ಬಿಜೆಪಿ ಹೇಳಿದೆ.

‘ಬಿಜೆಪಿಯ ಐಟಿ ಸೆಲ್ ನಮ್ಮ ಟೆಂಪ್ಲೆಟ್ ಬಳಸಿದ್ದು ನೋಡಿ ಆರಂಭದಲ್ಲಿ ಸಂತೋಷವಾಯಿತು. ಆದರೆ, ಬ್ಯಾಕ್‌ಲಿಂಕ್ ಅನ್ನು ತೆರವು ಮಾಡಿ ಮೂಲವನ್ನು ಉಲ್ಲೇಖಿಸದೇ ಬಳಸಿದ್ದರಿಂದ ಆಘಾತವಾಯಿತು’ ಎಂದು‘ವಿ3ಲೇಔಟ್‌’ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

‘ಬ್ಯಾಕ್‌ಲಿಂಕ್ ತೆರವು ಮಾಡಿದರೂ ಬಿಜೆಪಿಯು ನಮ್ಮ ಕೋಡ್‌ ಬಳಸಿಕೊಳ್ಳುತ್ತಿರುವುದು ವೆಬ್‌ಪೇಜ್‌ನ ಸೋರ್ಸ್‌ಕೋಡ್‌ನಿಂದ ತಿಳಿದುಬಂದಿದೆ’ ಎಂದು ಕಂಪನಿ ಹೇಳಿದೆ.

‘ಈಗ ಅವರು ಆ ಕೋಡ್‌ ಅನ್ನು ಸಂಪೂರ್ಣ ಬದಲಾಯಿಸಿರಬಹುದು. ಆದರೂ ತಾವು ಚೌಕೀದಾರ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರ ನೇತೃತ್ವದ ಪಕ್ಷವು ಸಣ್ಣ ಕಂಪನಿಯೊಂದು ಶ್ರಮವಹಿಸಿ ಸಿದ್ಧಪಡಿಸಿರುವ ಟೆಂಪ್ಲೆಟ್‌ ಬಳಸಿರುವುದು ಮತ್ತು ವಂಚನೆ ಎಂಬುದು ಗೊತ್ತಾದ ಕೂಡಲೇ ಅಲ್ಲಗಳೆದಿರುವುದು ಅಚ್ಚರಿಯುಂಟುಮಾಡಿದೆ’ ಎಂದು ಕಂಪನಿ ಹೇಳಿದೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT