ಚಂಡೀಗಢ: ಪಂಜಾಬ್ನ ಪಟಿಯಾಲ ಮತ್ತು ಹರಿಯಾಣದಲ್ಲಿ ಪೊಲೀಸ್ ಠಾಣೆಗಳ ಮೇಲೆ ನಡೆದ ಗ್ರೆನೇಡ್ ದಾಳಿಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ಭಯೋತ್ಪಾದಕ ಸಂಘಟನೆಯ ಮೂವರನ್ನು ಪಂಜಾಬ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತರದಿಂದ ಗ್ರೆನೇಡ್ಗಳು ಮತ್ತು ಎರಡು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

‘ಗುಪ್ತಚರ ಮಾಹಿತಿಯ ಮೇರೆಗೆ ಪಟಿಯಾಲದ ಗುಪ್ತಚರ ವಿಭಾಗದ ಅಧಿಕಾರಿಗಳು ಮತ್ತು ಮೊಹಾಲಿ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡದ ಸದಸ್ಯರು ಬಿಕೆಐನ ಮೂವರನ್ನು ಬಂಧಿಸಿದ್ದಾರೆ. ಪೊಲೀಸ್ ಠಾಣೆಗಳ ಮೇಲಿನ ಗ್ರೆನೇಡ್ ದಾಳಿಯಲ್ಲಿ ಇವರ ಕೈವಾಡವಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ’ ಎಂದು ಹೇಳಿದ್ದಾರೆ.

‘ವಿದೇಶದಲ್ಲಿ ನೆಲಸಿ ಬಿಕೆಐ ಪರ ಕೆಲಸ ಮಾಡುತ್ತಿರುವ ಮನು ಅಗವಾನ್ (ಗ್ರೀಸ್), ಮಣಿಂದರ್ ಬಿಲ್ಲಾ (ಮಲೇಷ್ಯಾ) ಮತ್ತು ಹರ್ವಿಂದರ್ ಸಿಂಗ್ (ಪಾಕಿಸ್ತಾನ) ಅವರ ಸೂಚನೆಯ ಮೇಲೆ ಈ ದಾಳಿ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.